ಗುರುವಾರ , ಜೂಲೈ 9, 2020
21 °C

ಶಿರಸಿ | ಹರ್ಬಲ್ ಕಷಾಯ ಕುಡಿದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ರಾಮನಬೈಲಿನಲ್ಲಿ ಭಾನುವಾರ ಬೆಳಿಗ್ಗೆ ಹರ್ಬಲ್ ಕಷಾಯ ಕುಡಿದ ತಂದೆ, ಮಗ ಇಬ್ಬರು ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವ ನಡುವೆ ಮಗ ಮೃತಪಟ್ಟಿದ್ದಾರೆ. 

ಫ್ರಾನ್ಸಿಸ್ ರೇಗೊ (42) ಮೃತ ವ್ಯಕ್ತಿ. ನಿಕೋಲ್‌ ರೇಗೊ (70) ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗುತ್ತಿದೆ. 

'ಆರೋಗ್ಯಕ್ಕೆ ಒಳ್ಳೆಯದು ಎಂದು ಅವರಿಬ್ಬರೂ ಯಾವುದೋ‌ ಬೇರಿನ ಕಷಾಯ ಕುಡಿದಿದ್ದರು' ಎಂದು ಸಂಬಂಧಿಕರು ತಿಳಿಸಿದ್ದಾರೆ. 

ಅವರ ಕಷಾಯಕ್ಕೆ ಬಳಸಿರುವ ಬೇರನ್ನು ಸಂಗ್ರಹಿಸಿ ತಂದಿದ್ದು, ಅದು ಯಾವ ಜಾತಿಯ ಬೇರು ಎಂದು ಇನ್ನಷ್ಟೇ ಗೊತ್ತಾಗಬೇಕಾಗಿದೆ ಎಂದು ಸಿಪಿಐ ಪ್ರದೀಪ ಬಿ.ಯು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು