ಕಾರವಾರ: ಶಿರಸಿ– ಕುಮಟಾ ರಾಜ್ಯ ಹೆದ್ದಾರಿಯು ಕಡಿದಾದ ತಿರುವುಗಳಿಂದ ಕೂಡಿದೆ. ಈ ರಸ್ತೆಯ ಹಲವೆಡೆ ಒಂದುಬಸ್ ಹೋದರೆ ಎದುರಿನಿಂದ ಬರುತ್ತಿರುವ ಮತ್ತೊಂದು ವಾಹನವನ್ನು ಬದಿಗೆ ನಿಲ್ಲಿಸುವಂತಹ ಅನಿವಾರ್ಯತೆಯಿದೆ. ಇಂಥ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೇ ಭಾರಿ ಸರಕು ತುಂಬಿದ ಲಾರಿಗಳು ಸಂಚರಿಸುತ್ತಿವೆ.

ಇಡೀ ರಸ್ತೆಯನ್ನು ಆಕ್ರಮಿಸಿಕೊಳ್ಳುವ ಇವು ತಿರುವುಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಚಿತ್ರದಲ್ಲಿರುವ ಲಾರಿಯ ಹೊರಭಾಗದಲ್ಲಿ ಸುಮಾರು ನಾಲ್ಕೈದು ಅಡಿಗಳಷ್ಟು ಅಗಲಕ್ಕೆ ಸರಕು ಹೇರಲಾಗಿತ್ತು. ಕತಗಾಲದ ಸಮೀಪ ಇದನ್ನು ಕಂಡ ಇತರ ವಾಹನಗಳ ಚಾಲಕರು ರಸ್ತೆ ಬಿಟ್ಟು ಬದಿಗೆ ಸರಿದು ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ತಾನು ಸಾಗುವ ರಸ್ತೆಯುದ್ದಕ್ಕೂ ಇದೇ ರೀತಿ ತೊಂದರೆ ಕೊಡುತ್ತಾ ಈ ಲಾರಿ ಹೋಗಿರುತ್ತದೆ. ಇದನ್ನು ಸಾರಿಗೆ ಇಲಾಖೆಯವರು ಅಥವಾ ಪೊಲೀಸರು ಯಾಕೆ ಗಮನಿಸಲಿಲ್ಲ ಎಂಬುದುಅಚ್ಚರಿ ಮೂಡಿಸುತ್ತದೆ.

ಕುಮಟಾದಲ್ಲಿ ಕಳೆದ ವರ್ಷ ಲಾರಿಯೊಂದರಲ್ಲಿ ವಿಪರೀತವಾಗಿ ಹೇರಿದ್ದ ಕಬ್ಬಿಣದ ಸರಕು ಬಸ್‌ನ ಒಳಹೊಕ್ಕು ಆಗಿದ್ದ ಅನಾಹುತ ಇನ್ನೂ ಸ್ಥಳೀಯರ ನೆನಪಿನಲ್ಲಿದೆ. ಆದರೂ ಈ ರೀತಿ ಸರಕು ಸಾಗಣೆಯನ್ನು ನಿಯಂತ್ರಿಸದಿರುವುದು ಬೇಸರ ತರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.