ಯಲ್ಲಾಪುರ: ತಾಲ್ಲೂಕಿನ ರಾಮನಕೊಪ್ಪದಲ್ಲಿ ಶನಿವಾರ ರಾತ್ರಿ ಕಾಣೆಯಾಗಿದ್ದ 40 ದಿನದ ಹಸುಗೂಸೊಂದು, ಸೋಮವಾರ ಬೆಳಿಗ್ಗೆ ಮನೆಯ ಹತ್ತಿರದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದೆ.

ರಾಮನಕೊಪ್ಪದ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಚಂದ್ರಶೇಖರ ನಾಗೇಶ ಭಟ್ಟ ಮತ್ತು ಪ್ರಿಯಾಂಕಾ ದಂಪತಿ ಹೆಣ್ಣು ಮಗು ಇದಾಗಿದೆ. ಪ್ರಿಯಾಂಕಾ ಅವರ ಮೊದಲ ಹೆರಿಗೆ ಮಗು ಇದಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಶನಿವಾರ ರಾತ್ರಿ 1.30ರ ಸುಮಾರಿಗೆ ಚಂದ್ರಶೇಖರ ಮಗುವನ್ನು ಕೈಯಾರೆ ಮಲಗಿಸಿದ್ದಾರೆ. ರಾತ್ರಿ 2.30ರ ಹೊತ್ತಿಗೆ ತಾಯಿ ಹಾಸಿಗೆಯಲ್ಲಿ ನೋಡಿದಾಗ, ಮಗು ಕಾಣದೇ ಇರುವುದು ಗಮನಕ್ಕೆ ಬಂದಿದೆ.

ಊರವರೆಲ್ಲ ಸೇರಿ ಮಗುವನ್ನು ಹುಡುಕಿದರೂ ಕಾಣದಿದ್ದಾಗ, ಅನಿವಾರ್ಯವಾಗಿ ಭಾನುವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ. ಭಾನುವಾರ ರಾತ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸೋಮವಾರ ಬೆಳಗಿನವರೆಗೂ ಮಗುವನ್ನು ಹುಡುಕಿದ್ದಾರೆ. ಅಲ್ಲದೆ, ದೇವರಲ್ಲಿ ಪ್ರಸಾದ, ಅಂಜನ, ಮಾಂತ್ರಿಕರನ್ನು ಕರೆಸಿ ಸಹ ಮಗುವನ್ನು ಹುಡುಕಿಸಲು ಪ್ರಯತ್ನ ನಡೆಸಲಾಗಿದೆ. ಸೋಮವಾರ ಬೆಳಕು ಹರಿದ ಮೇಲೆ, ನೀರು ತರಲು ಹೋದವರಿಗೆ ಮಗುವಿನ ಶವ ಬಾವಿಯಲ್ಲಿ ತೇಲುತ್ತಿರುವುದು ಕಂಡಿದೆ.

ಪಿಐ ಸುರೇಶ ಯಳ್ಳೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯಲ್ಲಿ ಮಗುವಿನ ತಂದೆ, ತಾಯಿ, ಅಜ್ಜ, ಅಜ್ಜಿ, ದೊಡ್ಡಪ್ಪ ವಾಸವಾಗಿದ್ದಾರೆ. ಶನಿವಾರ ರಾತ್ರಿ ಮಗು ನಾಪತ್ತೆ ಆದ ಸಮಯದಲ್ಲಿ ಮನೆಯ ಹೊರ ಬಾಗಿಲಿನ ಚಿಲಕ ತೆಗೆದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.