ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾದಿ ಮಠದಲ್ಲಿ ಅದ್ಧೂರಿ ಜಂಬೂ ಸವಾರಿ

ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು
Last Updated 8 ಅಕ್ಟೋಬರ್ 2019, 11:02 IST
ಅಕ್ಷರ ಗಾತ್ರ

ಶಿರಸಿ: ಜೈನ ಸಮುದಾಯದ ಪ್ರಸಿದ್ಧ ಪುಣ್ಯಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲಿ, ವಿಜಯ ದಶಮಿಯ ದಿನವಾದ ಮಂಗಳವಾರ ಅದ್ಧೂರಿಯಾಗಿಜಂಬೂ ಸವಾರಿನೆರವೇರಿಸಲಾಯಿತು. ಕ್ಷೇತ್ರದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿಸಾವಿರಾರು ಜನರು ಭಾಗವಹಿಸಿದ್ದರು.

ಶತಮಾನಗಳ ಹಿಂದೆ ರಾಜ ವಂಶಸ್ಥರ ಕಾಲದಲ್ಲಿ ಸ್ವಾದಿ ದಿಗಂಬರ ಜೈನ ಮಠದಲ್ಲಿ ಶರನ್ನವರಾತ್ರಿಯ ವಿಜಯ ದಶಮಿಯಂದು ಐದು ಆನೆಗಳಿಗೆ ಅಲಂಕಾರ ಮಾಡಲಾಗುತ್ತಿತ್ತು. ಬಳಿಕ ಅಂಬಾರಿಯ ಮೆರವಣಿಗೆ ವೈಭವೋಪೇತವಾಗಿ ನಡೆಸಲಾಗುತ್ತಿತ್ತು. ಕಾಲ ಕ್ರಮೇಣ ಆನೆ ಅಂಬಾರಿ ಪದ್ಧತಿ ನಿಂತಿತು.ಸುಮಾರು ಒಂದೂವರೆ ಶತಮಾನ ವಿಜಯ ದಶಮಿಯಂದು ಆನೆ ಅಂಬಾರಿ ಉತ್ಸವ ಮೆರವಣಿಗೆ ಇಲ್ಲದೆ ಕಳೆದು ಹೋಗಿತ್ತು. ಮಠದ ಪೀಠಾಧಿಪತಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಠದ ಮರೆಯಾದ ಸಂಪ್ರದಾಯಕ್ಕೆಮತ್ತೆ ಚಾಲನೆ ನೀಡಿದರು.

ಇದರ ಅಂಗವಾಗಿ ಮಠದಲ್ಲಿ ನವರಾತ್ರಿಯ ವಿವಿಧ ಧಾರ್ಮಿಕ ಪೂಜಾ ವಿಧಿ– ವಿಧಾನಗಳನ್ನು ಸ್ವಾಮೀಜಿ ನೆರವೇರಿಸಿದರು. ಪಂಚಾಮೃತಾಭಿಷೇಕ ಪೂರ್ಣಗೊಳಿಸಿ ಆಚಾರ್ಯ ಅಕಲಂಕ ಅವರ ಭಾವಚಿತ್ರ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಅಂಬಾರಿ ಹೊತ್ತಅಲಂಕೃತ ಆನೆಗೆ ಪೂಜೆ ನೆರವೇರಿಸಿದರು. ಈ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಿದ್ದರು.

ಎರಡುಕುದುರೆಗಳಸಾರಥ್ಯದಲ್ಲಿ ಜಂಬೂ ಸವಾರಿ ಸಾಗಿತು. ಈ ಸಂದರ್ಭದಲ್ಲಿ ಮಹಿಳೆಯರು ಪೂರ್ಣ ಕುಂಭ ಹೊತ್ತು ಹೆಜ್ಜೆ ಹಾಕಿದರು. ಡೊಳ್ಳು, ತಮಟೆ, ಶಹನಾಯಿ ವಾದನಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿದ್ದವು.

ಆಚಾರ್ಯ ಅಕಲಂಕ ಕರಂದೆಯಲ್ಲಿ ಜೈನ ಧರ್ಮದ ಶ್ರೇಯೋಭಿವೃದ್ಧಿಗೆ ಬೌದ್ಧ ಧರ್ಮದ ವಿರುದ್ಧ ಸತತಒಂಬತ್ತುದಿನಗಳ ವಾದ ಮಂಡಿಸಿ 10ನೇ ದಿನ ಗೆಲುವು ಸಾಧಿಸಿದ್ದರು. ಆ ವಿಜಯದ ನೆನಪಿಗಾಗಿ ವಿಜಯ ದಶಮಿ ದಿನವನ್ನು ಉತ್ಸವವನ್ನಾಗಿ ಆಚರಿಸಲಾಯಿತು. ವರ್ಷಕ್ಕೆ ಒಮ್ಮೆ ಮಾತ್ರಸ್ವಾಮೀಜಿ ನೆರವೇರಿಸುವಸದ್ಧರ್ಮ ಸಿಂಹಾಸನ ಪೀಠಾರೋಹಣ ಮತ್ತು ಧರ್ಮೋಪದೇಶ ಕಾರ್ಯವನ್ನೂ ಹಮ್ಮಿಕೊಳ್ಳಲಾಯಿತು. ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT