ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಂಜಲ್ ಜಲಪಾತ ಏರಲು ಸಿದ್ಧತೆ: ದೇಹ ತೂಕ ಇಳಿಸಿಕೊಂಡ ಜ್ಯೋತಿರಾಜ್

Last Updated 9 ಮಾರ್ಚ್ 2020, 1:58 IST
ಅಕ್ಷರ ಗಾತ್ರ

ಶಿರಸಿ: ವಿಶ್ವದಅತಿ ಎತ್ತರದ ‘ಏಂಜಲ್’ ಜಲಪಾತಏರಲುಸಿದ್ಧತೆಯಲ್ಲಿ ತೊಡಗಿರುವ ಚಿತ್ರದುರ್ಗದ ಜ್ಯೋತಿರಾಜ್, ದೈಹಿಕ ಕಸರತ್ತುಗಳಲ್ಲಿ ತೊಡಗಿಕೊಂಡಿದ್ದಾರೆ ಇಲ್ಲಿನನಿಸರ್ಗ ಮನೆಯಲ್ಲಿ 40 ದಿನಗಳಿಂದ ಇರುವ ಅವರು, ವೈದ್ಯರು ಹಾಗೂ ಸಿಬ್ಬಂದಿ ಮಾರ್ಗದರ್ಶನದಲ್ಲಿ ದೇಹದ ತೂಕವನ್ನು ಸದ್ಯ 73 ಕೆ.ಜಿ.ಗೆ ಇಳಿಸಿದ್ದಾರೆ.

ಜ್ಯೋತಿರಾಜ್, ಎರಡು ವರ್ಷಗಳ ಹಿಂದೆ ಜೋಗ ಜಲಪಾತದಲ್ಲಿ ಅವರು ಜೀವರಕ್ಷಕ ಕಾರ್ಯಾಚರಣೆಯೊಂದರಲ್ಲಿ ಭಾಗವಹಿಸಿದ್ದರು. ಆಗ ಬಿದ್ದು ಗಾಯಗೊಂಡಿದ್ದ ಅವರು ದೀರ್ಘಕಾಲೀನ ವಿಶ್ರಾಂತಿ ಪಡೆದಿದ್ದರು. ಅದರ ಪರಿಣಾಮ ದೇಹದ ತೂಕ120 ಕೆ.ಜಿ.ಗೆ ಏರಿಕೆಯಾಗಿತ್ತು.

‘ನಿಸರ್ಗ ಮನೆ’ಯ ವೈದ್ಯರು ಹಾಗೂ ಸಿಬ್ಬಂದಿ ಡಾ. ಪ್ರವೀಣ ಜಾಕೋಬ್ ಅವರ ನೇತೃತ್ವದಲ್ಲಿ ಜ್ಯೋತಿರಾಜ್‌ಗೆ ವಿವಿಧ ಸಲಹೆ, ಸೂಚನೆ ನೀಡುತ್ತಿದ್ದಾರೆ.ಈಗಾಗಲೇ ವೇಗವಾಗಿ ಓಡುವ ವ್ಯಾಯಾಮ ಮಾಡಿ 86ಕೆ.ಜಿ.ಗೆ ಕಡಿಮೆ ಮಾಡಿಕೊಂಡಿದ್ದರು. ಆದರೆ, ಈ ತೂಕದೊಂದಿಗೆ ವೆನಿಜುವೆಲಾ ದೇಶದ ‘ಏಂಜಲ್’ ಜಲಪಾತವನ್ನೇರಲು ಜ್ಯೋತಿರಾಜ್‌ಗೆ ಕಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಮತ್ತಷ್ಟು ಹಗುರಾಗಿ ದೇಹದ ತೂಕವನ್ನು65 ಕೆ.ಜಿ.ಗೆ ಇಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

‘ಇನ್ನೂ ಕೆಲವು ದಿನ ದೇಹದ ತೂಕ ಇಳಿಸುವ ಪ್ರಯತ್ನ ನಡೆಯಲಿದೆ. ಜ್ಯೋತಿರಾಜ್ ನಿತ್ಯವೂ ಕಠಿಣ ಪರಿಶ್ರಮ ಮಾಡುತ್ತಿದ್ದು, ಅವರ ಕನಸಿನ ಸಾಧನೆ ಮಾಡುವ ಆತ್ಮವಿಶ್ವಾಸ ಹೊಂದಿದ್ದೇವೆ’ ಎಂದು‘ನಿಸರ್ಗ ಮನೆ’ಯ ಡಾ.ವೆಂಕಟರಮಣ ಹೆಗಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT