ಕಾರವಾರ: ಜೆಲ್ಲಿಫಿಶ್ ಮಾದರಿಯ ವಿಷಕಾರಿ ಜಲಚರಗಳಾದ ‘ಫೈಸಾಲಿಯಾ ಫೈಸಾಲಿಸ್’, ನಗರದ ಟ್ಯಾಗೋರ್ ಕಡಲತೀರದ ಉದ್ದಕ್ಕೂ ಶುಕ್ರವಾರ ಕಾಣಿಸಿಕೊಂಡವು. ನೇರಳೆ, ನೀಲಿ ಬಣ್ಣದ ಈ ಜಲಚರ, ನೋಡಲು ಸುಂದರವಾಗಿದ್ದರೂ ವಿಷಕಾರಿ.ಇದನ್ನು ಮುಟ್ಟಿದರೆ ಮೀನುಗಳು ಸಾಯುತ್ತವೆ. ಮನುಷ್ಯರಿಗೂ ಇದು ಅಪಾಯಕಾರಿ ಎಂದು ಕಡಲ ವಿಜ್ಞಾನಿಗಳುತಿಳಿಸಿದ್ದಾರೆ.

ಶುಕ್ರವಾರ ಸಂಜೆ ಕಡಲತೀರಕ್ಕೆ ತೆರಳಿದ್ದ ಇಲ್ಲಿನ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಈ ಜಲಚರವನ್ನು ಗುರುತಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ, ‘ಈ ಜಲಚರ ಬಹಳ ವಿಷಕಾರಿ. ಇದರ ವಿಷ ತಾಗಿದರೆ ಮನುಷ್ಯರಿಗೆ ವಾಂತಿ, ತುರಿಕೆ, ಕಜ್ಜಿಹಾಗೂ ನರ ದೌರ್ಬಲ್ಯವೂ ಉಂಟಾಗಬಹುದು. ವಿಷದ ಪ್ರಮಾಣ ಹೆಚ್ಚಾದರೆ ಸ್ಪರ್ಶಿಸಿದವರು ಸಾಯುವಅಪಾಯವೂಇದೆ. ಹಾಗಾಗಿ ಅದನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಲೇಬಾರದು’ ಎಂದು ಅವರುಎಚ್ಚರಿಕೆ ನೀಡಿದ್ದಾರೆ. ಬಹಳ ಸುಂದರವಾಗಿಈ ಗೋಚರಿಸುವ ಈ ಜಲಚರ ದೊಡ್ಡ ಅಲೆಗಳೊಂದಿಗೆ ಬಂದಿರಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.