ಗುರುವಾರ , ಜೂನ್ 24, 2021
29 °C
ಪೆಟ್ಲೆಂಡೆ ಇಲ್ಲದ ಹಬ್ಬದಿಂದ ಮಕ್ಕಳಿಗೆ ಬೇಸರ

ಕೃಷ್ಣ ಜನ್ಮಾಷ್ಟಮಿ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲಾಯಿತು. ಭಕ್ತರು ಮಂಗಳವಾರ ಮತ್ತು ಬುಧವಾರ ಕೋಟಿತೀರ್ಥ ಕಟ್ಟೆಯಲ್ಲಿರುವ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ನಿರ್ದಿಷ್ಟಪಡಿಸಿದ್ದ ಸಮಯದಲ್ಲಿ ಪೂಜೆ ಸಲ್ಲಿಸಿದರು.

ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಬಾಲಕೃಷ್ಣನ ಬೆಳ್ಳಿಯ ಮೂರ್ತಿಯನ್ನು ಬೆಳ್ಳಿಯ ತೊಟ್ಟಿಲಲ್ಲಿ ಮಲಗಿಸಿ ಕೃಷ್ಣನ ಜನ್ಮಾಚರಣೆಯನ್ನು ಆಚರಿಸಲಾಯಿತು.

ಪುರಾತನ ಕಾಲದಿಂದ ೀ ಸಂದರ್ಭದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಭಜನಾ ಸಪ್ತಾಹವನ್ನು ಕೋವಿಡ್-19 ಕಾರಣಕ್ಕೆ ಈ ವರ್ಷ ಆಚರಿಸದೇ ಕೈಬಿಡಲಾಯಿತು. ಎಲ್ಲ ಸಮುದಾಯದವರು ಈ ಭಜನಾ ಸಪ್ತಾಹದಲ್ಲಿ ಭಾಗವಹಿಸುವುದು ಇಲ್ಲಿನ ವಿಶೇಷ.

ಮಕ್ಕಳಿಗೆ ನಿರಾಸೆ ತಂದ ಹಬ್ಬ: ಈ ವರ್ಷದ ಕೃಷ್ಣಾಷ್ಟಮಿ ಹಬ್ಬ ಮಕ್ಕಳಿಗೆ ನಿರಾಸೆ ಉಂಟುಮಾಡಿತು. ಈ ಹಬ್ಬದ ದಿವಸ ಪೆಟ್ಲೆ ಹೊಡೆಯುವುದು ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈ ವರ್ಷ ಪೆಟ್ಲೆ ಅಂಡೆಗೆ ಉಪಯೋಗಿಸುವ ಜುಮ್ಮನ ಕಾಳು ಇನ್ನೂ ಆಗದಿರುವುದೇ ಮಕ್ಕಳು ಉತ್ಸಾಹದಿಂದ ಈ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಈ ಹಬ್ಬದಲ್ಲಿ ಪೆಟ್ಲೆ ಹೊಡೆದವನಿಗೆ ಖುಷಿಯಾದರೆ, ಹೊಡೆತ ತಿಂದವನಿಗೆ ಉರಿಯಾಗುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.