ಸೋಮವಾರ, ಸೆಪ್ಟೆಂಬರ್ 20, 2021
29 °C
ಸ್ವಾತಂತ್ರೋತ್ಸವದಂದು ಜಾಥಾ ನಡೆಸಿದ ಭೂಮಿ ಹಕ್ಕು ಹೋರಾಟಗಾರರು

ರೈತರಿಗೆ ಸಾಂವಿಧಾನಿಕ ಭೂಮಿ ಹಕ್ಕು ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ದೇಶ ಸ್ವಾತಂತ್ರ್ಯೋತ್ಸವದ ಅಮೃತ ವರ್ಷದ ಹೊಸ್ತಿಲಿಗೆ ತಲುಪಿದ್ದರೂ ಸಂವಿಧಾನಾತ್ಮಕ ಭೂಮಿ ಹಕ್ಕಿನಿಂದ ವಂಚಿತವಾದ ಲಕ್ಷಾಂತರ ಜನರಿದ್ದಾರೆ. ಅವರ ಹಕ್ಕು ನೀಡಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂದು ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಸರ್ಕಾರದ ಗಮನ ಸೆಳೆಯುವ ಉದ್ದೇಶಕ್ಕೆ ಸ್ವಾತಂತ್ರ್ಯೋತ್ಸವದ ದಿನ ‘ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ?’ ಘೋಷಣೆ ಅಡಿ ವೇದಿಕೆ ವತಿಯಿಂದ ಪಾದಯಾತ್ರೆ ನಡೆಸಿ, ಬಳಿಕ ಕಚೇರಿಯಲ್ಲಿ ಸೈನಿಕರಾದ ನವೀನ್ ಹರಿಹರ ನಾಯ್ಕ, ಓಂಕಾರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ನವೀನಕುಮಾರ, ‘ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಕೈಲಾದ ಸೇವೆ ಮಾಡಬೇಕು’ ಎಂದರು.

ನೂರಾರು ಅರಣ್ಯ ಅತಿಕ್ರಮಣದಾರರು ಹೋರಾಟ ವೇದಿಕೆಯ ಕಾರ್ಯಾಲಯದಿಂದ ಝೂ ಸರ್ಕಲ್ ವರೆಗೆ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆ ಮಾಡಿದ್ದರು.

ಸತೀಶ ನಾಯ್ಕ ಮಧುರವಳ್ಳಿ, ಹರಿಹರ ನಾಯ್ಕ ಹುಕ್ಕಳಿ, ಇಬ್ರಾಹಿಂ ಸಾಬ, ಲಕ್ಷ್ಮಣ ಮಾಳ್ಳಕ್ಕನವರ, ಶಿವಪ್ಪ ಹಂಚಿನಕೇರಿ, ದ್ಯಾವಾ ಗೌಡ ಹೆಗ್ಗೆ, ಸೀತಾರಾಮ ಗೌಡ ಹುಕ್ಕಳಿ, ರಾಜು ನರೇಬೈಲ್, ಶಿವಾನಂದ ಜೋಗಿ, ಸ್ವಾಮಿ ಹಿರೇಮಠ, ಸೀತಾರಾಮ ಗೌಡ, ಎಂ.ಪಿ.ಗೌಡ ಹುಕ್ಕಳಿ, ರಾಜು ಉಗ್ರಾಣಕರ, ಮಧುಕರ ಜೋಗಿನಮನೆ, ನಾಗಪತಿ ಗೌಡ, ಮಂಜುನಾಥ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.