ಶನಿವಾರ, ಅಕ್ಟೋಬರ್ 23, 2021
21 °C

ಕುಮಟಾ: ನಾಯಿ ಬೇಟೆಗೆ ಬಂದ ಚಿರತೆ ನಾಯಿ ಪಂಜರದಲ್ಲೇ ಬಂಧಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ತಾಲ್ಲೂಕಿನ ಕಿಮಾನಿಯಲ್ಲಿ ಗುರುವಾರ ಮುಂಜಾನೆ ನಾಯಿ ಬೇಟೆಯಾಡಲು ಊರಿಗೆ ಬಂದ ಚಿರತೆಯೊಂದು, ಮನೆಯ ಅಂಗಳದಲ್ಲಿರುವ ನಾಯಿ ಪಂಜರದಲ್ಲಿ ಆಕಸ್ಮಿಕವಾಗಿ ಸೆರೆಯಾಗಿದೆ.

ಕಿಮಾನಿಯ ವಿಷ್ಣು ನಾಗಪ್ಪ ಹರಿಕಾಂತ ಅವರ ಮನೆಯ ನಾಯಿ ಮರಿ ಬೆಳಗಿನ ಜಾವ ಕಿರುಚಿಕೊಂಡಿದ್ದು ಕೇಳಿ ಮನೆಯವರು ಹೊರಗೆ ಬಂದು ನೋಡಿದರು. ಆಗ ನಾಯಿ ಪಂಜರದ ಮೂಲೆಯಲ್ಲಿ ಕುಳಿತು ಚಿರತೆ ಗರ್ಜಿಸುತ್ತಿತ್ತು. ಇನ್ನೊಂದು ಮೂಲೆಯಲ್ಲಿದ್ದ ನಾಯಿ ಮರಿ ಬೆದರಿ ಚೀರುತ್ತಿತ್ತು. ಇದನ್ನು ಕಂಡು ಮನೆಯವರು ಉದ್ದ ಕಬ್ಬಿಣದ ಸರಳಿನ ಸಹಾಯದಿಂದ ನಾಯಿ ಪಂಜರದ ಬಾಗಿಲು ಮುಚ್ಚಿದರು.

'ಜನರನ್ನು ನೋಡಿ ಭಯಗೊಂಡ ಚಿರತೆ ನಾಯಿಗೆ ಏನೂ ಮಾಡದೆ ಸುಮ್ಮನೆ ಕುಳಿತಿತ್ತು. ಅರಣ್ಯ ಇಲಾಖೆಗೆ ಮಾಹಿತಿ‌ ನೀಡಿದಾಗ ಸಿಬ್ಬಂದಿ ಬಂದು ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದರು' ಎಂದು ಹಿರೇಗುತ್ತಿ ವಲಯ ಅರಣ್ಯ ಅಧಿಕಾರಿ ನರೇಶ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು