ಗಂಡು ಚಿರತೆ ಅಸಹಜ ಸಾವು: ವಾಹನ ಡಿಕ್ಕಿಯಾಗಿರುವ ಸಾಧ್ಯತೆ

ಕಾರವಾರ: ನಗರದ ಬಿಣಗಾ ಐ.ಟಿ.ಐ ಕಾಲೇಜಿನ ಬಳಿ ಹೆದ್ದಾರಿ ಬಳಿಕ ಗಂಡು ಚಿರತೆಯೊಂದರ ಮೃತದೇಹವು ಸೋಮವಾರ ಕಂಡುಬಂದಿದೆ. ಅದರ ಕೈ, ಕಾಲುಗಳಿಗೆ ಗಂಭೀರವಾದ ಏಟಾಗಿದ್ದು, ಯಾವುದೋ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಊಹಿಸಿದ್ದಾರೆ.
‘ಈ ಪ್ರದೇಶದಲ್ಲಿ ಚಿರತೆಯೊಂದರ ಚಲನವಲನವು ಸಮೀಪದ ಮನೆಯೊಂದರ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕೆಲವು ದಿನಗಳ ಹಿಂದೆ ದಾಖಲಾಗಿತ್ತು. ಅದೇ ಚಿರತೆ ಇದಾಗಿರಬಹುದು. ಮೃತ ಚಿರತೆಗೆ ಸುಮಾರು ನಾಲ್ಕು ವರ್ಷವಾಗಿದ್ದು, ದಷ್ಟಪುಷ್ಟವಾಗಿದೆ. ಕಳೇಬರವು ದುರ್ವಾಸನೆ ಬೀರುತ್ತಿದ್ದು, ಎರಡು ಮೂರು ದಿನಗಳ ಮೊದಲೇ ಮೃತಪಟ್ಟಿರುವ ಸಾಧ್ಯತೆಯಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯಂತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.