ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ಗಿಡ್ಡ’ಕ್ಕೆ ವರ್ಗೀಕೃತ ಕೃತಕ ಗರ್ಭಧಾರಣೆ

ಕಾರವಾರ ತಾಲ್ಲೂಕಿನಲ್ಲಿ ಕ್ಷೀರೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಿದ ಜಿಲ್ಲಾ ಪಂಚಾಯ್ತಿ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನಲ್ಲಿ ಹಿಂದುಳಿದಿರುವ ಹೈನುಗಾರಿಕೆಯನ್ನು ಅಭಿವೃದ್ಧಿ ಮಾಡಲುಜಿಲ್ಲಾ ಪಂಚಾಯ್ತಿ ಮುಂದಡಿಯಿಟ್ಟಿದೆ. ಈ ಭಾಗದಲ್ಲಿ ಸಾಮಾನ್ಯವಾಗಿರುವಮಲೆನಾಡು ಗಿಡ್ಡ ಆಕಳಿಗೆ, ಹೆಚ್ಚು ಹಾಲು ಕೊಡುವ ‘ಹೈಬ್ರಿಡ್ ತಳಿ’ಯ ಕೃತಕ ಗರ್ಭಧಾರಣೆ ಮಾಡುವ ಯೋಜನೆ ಜಾರಿ ಮಾಡಿದೆ.

ಕಾರವಾರ, ಮಲ್ಲಾಪುರ, ಕದ್ರಾ ಸುತ್ತಮುತ್ತಲಿನ ಗ್ರಾಮಗಳಜನರು ಪ್ರಸಿದ್ಧ ‘ಮಲೆನಾಡು ಗಿಡ್ಡ’ವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಅವುಗಳಿಂದ ದಿನಕ್ಕೆ ಕೇವಲ ಒಂದರಿಂದ ಒಂದೂವರೆ ಲೀಟರ್‌ನಷ್ಟು ಹಾಲು ಸಿಗುತ್ತದೆ. ಇದರಿಂದ ಆದಾಯ ಜಾಸ್ತಿಯಿಲ್ಲ ಎಂದು ಹೆಚ್ಚಿನವರು ಹೈನುಗಾರಿಕೆಯನ್ನು ವಿಸ್ತರಿಸಲು ಮುಂದಾಗುತ್ತಿಲ್ಲ. ಇದನ್ನು ಗಮನಿಸಿದ ಜಿಲ್ಲಾ ಪಂಚಾಯ್ತಿಯು, ಈ ಭಾಗದಲ್ಲಿ ಹೈನುಗಾರಿಕೆಯನ್ನು ಲಾಭದಾಯಕವಾಗಿಸಲುಚಿಂತಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ಕೃತಕ ಗರ್ಭಧಾರಣೆಗೆ ಹಾಲ್‌ಸ್ಟೀನ್ ಮತ್ತು ಜೆರ್ಸಿ ತಳಿಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆಯ ಜಾರಿಗೆ ಮುಂಬೈನ ಬೈಫ್ (BAIF) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ಎರಡು ಕೇಂದ್ರಗಳು

‘ಯೋಜನೆಯಲ್ಲಿ ಪಶುಪಾಲನೆ, ಪಶುವೈದ್ಯಕೀಯ ಸೇವಾ ಇಲಾಖೆಮತ್ತು ಬೈಫ್ ಜೊತೆಯಾಗಿ ಕೆಲಸ ಮಾಡಲಿವೆ. ಇದರ ಭಾಗವಾಗಿ ಮಲ್ಲಾಪುರ ಮತ್ತು ಗೊಟೆಗಾಳಿಯಲ್ಲಿ ಎರಡು ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾಪಿಸಲಾಗಿದೆ. ಇಲ್ಲಿತಲಾ ಒಬ್ಬ ವಿಜ್ಞಾನಿ ಮತ್ತು ಪ್ರೇರಕ ಮೂರು ವರ್ಷ ಕರ್ತವ್ಯ ನಿರ್ವಹಿಸುತ್ತಾರೆ’ ಎಂದು ತಿಳಿಸಿದರು.

ಹೆಣ್ಣು ಕರುಗಳ ಜನನ

‘ಮೊದಲ ಎರಡು ವರ್ಷಗಳಲ್ಲಿ 1,160 ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲಾಗುವುದು. ಇದಕ್ಕೆ ಬೈಫ್ ಸಂಸ್ಥೆ ಪೇಟೆಂಟ್ ಹೊಂದಿರುವ ವರ್ಗೀಕೃತ ವೀರ್ಯ (Sorted Semen) ತಂತ್ರಜ್ಞಾನದಬಳಕೆಯಾಗಲಿದೆ.ಇದರ ಮೂಲಕಹಸುಗಳು ಹೆಣ್ಣು ಕರುಗಳಿಗೇ ಜನ್ಮ ನೀಡಲಿವೆ. ಇವುಗಳಲ್ಲಿ ಶೇ 50ರಷ್ಟು ಯಶಸ್ವಿಯಾದರೂ 580 ಹಸುಗಳು ಗರ್ಭ ಧರಿಸುತ್ತವೆ. ಅವುಗಳಿಗೆ ಕನಿಷ್ಠ 406 ಕರುಗಳು ಜನಿಸಬಹುದು ಎಂದು ಅಂದಾಜಿಸಲಾಗಿದೆ’ ಎಂದು ವಿವರಿಸಿದರು.

‘ಮೂರು ವರ್ಷಗಳಲ್ಲಿ ಅವುಬೆಳೆದು ಪ್ರೌಢಾವಸ್ಥೆಗೆ ಬಂದಾಗ ಸುಮಾರು126 ಹಸುಗಳು ಮೊದಲ ಕರುವಿಗೆ ಜನ್ಮ ನೀಡುತ್ತವೆ. ಆಗ ಪ್ರತಿ ಹಸುವೂ ದಿನಕ್ಕೆ 10ರಿಂದ 15 ಲೀಟರ್ ಹಾಲು ನೀಡಲಿದೆ. ಆಗ ಕೆ.ಎಂ.ಎಫ್ ಸಹಭಾಗಿತ್ವದಲ್ಲಿ ಡೇರಿಗಳನ್ನು ಸ್ಥಾಪಿಸಿ ಹಾಲು ಖರೀದಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಗಿಡ್ಡ’ದ ಅಸ್ತಿತ್ವಕ್ಕೆ ದಕ್ಕೆಯಿಲ್ಲ

‘ಕಾರವಾರ ತಾಲ್ಲೂಕಿನಲ್ಲಿ 4,000ಕ್ಕೂ ಅಧಿಕ ಮಲೆನಾಡು ಗಿಡ್ಡ ಹಸುಗಳಿವೆ. ಹೊಸ ಯೋಜನೆಯಂತೆ ಮಿಶ್ರ ತಳಿಯ 300 ಹಸುಗಳು ಬೆಳೆಯಬಹುದು. ಈ ಯೋಜನೆಯು ಆಸಕ್ತರಿಗಷ್ಟೇ ಹೊರತು, ಯಾರಿಗೂ ಕಡ್ಡಾಯವಿಲ್ಲ’ ಎಂದು ಮೊಹಮ್ಮದ್ ರೋಶನ್ ಸ್ಪಷ್ಟಪಡಿಸಿದರು.

‘ಬೈಫ್’ನವರು ಕಳೆದ ವರ್ಷ ಯಲ್ಲಾಪುರದಲ್ಲಿ ಪ್ರಾಯೋಗಿಕವಾಗಿ ಮಲೆನಾಡು ಗಿಡ್ಡ ತಳಿಯ ಹಸುವಿಗೆ ಹಾಲ್‌ಸ್ಟೀನ್ ತಳಿಯ ಕೃತಕ ಗರ್ಭಧಾರಣೆ ಮಾಡಿಸಿದ್ದರು. ಅದರಿಂದ ಹುಟ್ಟಿದ ಕರುವಿನ ತೂಕ ‘ಗಿಡ್ಡ’ ತಳಿಯ ಕರುವಿಗಿಂತ ಎರಡು ಕೆ.ಜಿ.ಗಳಷ್ಟೇ ಹೆಚ್ಚಿತ್ತು. ಹಾಗಾಗಿ ಗರ್ಭಾವಸ್ಥೆಯಲ್ಲಿ ತಾಯಿ ಹಸು ಮತ್ತು ಕರುವಿನ ಆರೋಗ್ಯಕ್ಕೂ ತೊಂದರೆಯಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT