ಮಂಗಳವಾರ, ಜುಲೈ 14, 2020
27 °C

ಮುಂಡಗೋಡ: ಗಂಟಲಲ್ಲಿ ಸಮೋಸ ಸಿಲುಕಿ ಮಂಗೋಲಿಯಾದ ಬಿಕ್ಕು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮುಂಡಗೋಡ: ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಕ್ಕಿ ಉಸಿರಾಡಲು ಆಗದೇ ಬಿಕ್ಕುವೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. 

ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತಪಟ್ಟವರು. ಅವರು ಇಲ್ಲಿನ ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದರು. ಸೋಮವಾರ ತನ್ನ ಕೊಠಡಿಯಲ್ಲಿ ಸಮೋಸಾ ತಿನ್ನುವಾಗ ಈ ದುರ್ಘಟನೆ ನಡೆದಿದೆ.

ಬಿಕ್ಕಳಿಕೆ ಬಂದು ಉಸಿರಾಡಲು ತೊಂದರೆಯಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು