ಬುಧವಾರ, ಜೂನ್ 29, 2022
25 °C

ಸಿದ್ದಾಪುರ: ಹಲ್ಲೆ ಮಾಡಿ ಪತ್ನಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಶುಕ್ರವಾರ ತಾಲ್ಲೂಕಿನ ಹೆಗ್ಗೋಡ್ ಮನೆಯಲ್ಲಿ ನಡೆದಿದೆ. ನಾಗರತ್ನ ಮಂಜುನಾಥ್ ಚನ್ನಯ್ಯ (38) ಕೊಲೆಯಾದವರು.

ವಿಪರೀತ ಮದ್ಯ ಕುಡಿಯುವ ಹವ್ಯಾಸ ರೂಢಿಸಿಕೊಂಡಿದ್ದ ಆರೋಪಿ ಮಂಜುನಾಥ್ ಕೇರಿಯ ಚೆನ್ನಯ್ಯ ಆಗಾಗ ಹೆಂಡತಿಯ ಜೊತೆ ಜಗಳ ಮಾಡುತ್ತಿದ್ದ. ಶುಕ್ರವಾರ ಬೆಳಿಗ್ಗೆ ಸಹ ಗಲಾಟೆ ನಡೆದು ಮನೆಯ ಜಗಲಿ ಕಟ್ಟೆ ಮೇಲೆ ಹೂವು ಕಟ್ಟುತ್ತಾ ಕುಳಿತಿದ್ದ ಹೆಂಡತಿ ನಾಗರತ್ನ  ಮೇಲೆ ಕತ್ತಿಯಿಂದ ಕುತ್ತಿಗೆಗೆ, ತಲೆಗೆ ಹಲ್ಲೆ ನಡೆಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಕೇರಿಯ ಚೆನ್ನಯ್ಯ ಎನ್ನುವವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು