ಶುಕ್ರವಾರ, ಮೇ 27, 2022
26 °C

ನೈಟ್‌ ಕರ್ಪ್ಯೂ ಜಾರಿಗೆ ಕಟ್ಟುನಿಟ್ಟಿನ ಕ್ರಮ; ರೆಸಾರ್ಟ್‌, ಹೋಂ ಸ್ಟೇಗಳಿಗೆ ಹೊಡೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ಕೋವಿಡ್ ಎರಡನೇ ಅಲೆಯ ನಂತರ ದಾಂಡೇಲಿಯಲ್ಲಿ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಓಮೈಕ್ರಾನ್‌ ನಿಯಂತ್ರಣ ಕ್ರಮವಾಗಿ ರಾತ್ರಿ ಕರ್ಪ್ಯೂ ವಿಧಿಸಿರುವುದರಿಂದ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೊಸ ವರ್ಷಾಚರಣೆಯ ಹುಮ್ಮಸ್ಸಿನಲ್ಲಿದ್ದ ಪ್ರವಾಸಿಗರಿಗೂ ನಿರಾಸೆ ಮೂಡಿಸಿದೆ.

ದಾಂಡೇಲಿ - ಜೊಯಿಡಾ ಭಾಗದಲ್ಲಿ ಹೊಸ ವರ್ಷಾಚರಣೆಗಾಗಿ ಭಾಗಶಃ ರೆಸಾರ್ಟ್, ಹೋಂಸ್ಟೇ, ಲಾಡ್ಜ್ ಗಳು ಈಗಾಗಲೇ ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಆಗಿವೆ.  ಪ್ರವಾಸಿಗರ ಮನರಂಜನೆಗಾಗಿ ಧ್ವನಿವರ್ಧಕ ಡಿ.ಜೆ, ರೇನ್ ಡ್ಯಾನ್ಸ್, ಸಂಗೀತ, ನೃತ್ಯ, ವಿಶೇಷವಾದ ಆಹಾರ ಸಿದ್ಧತೆಗೆ ತಯಾರಿ ಮಾಡಿದ್ದಾರೆ.

ಆದರೆ, ಹೊಸ ವರ್ಷಕ್ಕೆ ರಾತ್ರಿ 8 ಗಂಟೆಯಿಂದ ಕರ್ಫ್ಯೂ ಜಾರಿಗೆ ಜಿಲ್ಲೆಯ ಎಸ್‌ಪಿ ಆದೇಶಿಸಿದ್ದಾರೆ. ಹೀಗಾದರೆ ಆಗಿರುವ ಬುಕ್ಕಿಂಗ್ ರದ್ದಾಗುವ ಸಾಧ್ಯ ಇದೆ. ಕಳೆದ ಎರಡು ವರ್ಷಗಳಿಂದ ಹೋಟೆಲ್ ಉದ್ಯಮ ಮಕಾಡೆ ಮಲಗಿದೆ. ಈಗ ಮತ್ತೆ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದರಿಂದ ಉದ್ಯಮದ ಮೇಲೆ ಬಾರಿ ಹೊಡೆತ ಬಿಳ್ಳಲಿದೆ ಎನ್ನುತ್ತಾರೆ ರೆಸಾರ್ಟ್ ಮಾಲೀಕರಾದ ಅನಿಲ ದಂಡಗಲ್ಲ.

ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಗರದಲ್ಲಿ ಹೋಟೆಲ್, ಲಾಡ್ಜ್ ಗಳಲ್ಲಿ ಯಾವುದೇ ರೀತಿಯ ಮನರಂಜನೆ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ಇಲ್ಲ. ಇದನ್ನು ಮೀರಿದರೆ ಕ್ರಮ
ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ರಾಜಾರಾಮ ಪವಾರ್ ಅವರು ಮೂಲಕ ಎಚ್ಚರಿಕೆ
ನೀಡಿದ್ದಾರೆ.

ದಾಂಡೇಲಿ ವ್ಯಾಪ್ತಿಯ ರೆಸಾರ್ಟ್, ಹೋಂಸ್ಟೇ ಲಾಡ್ಜ್‌ ಗಳಿಗೆ ಲಿಖಿತ ಮುನ್ಸೂಚನಾ ಪತ್ರವನ್ನು ಹೊರಡಿಸಲಾಗಿದೆ. ಜನರು ಸೇರುವ ಯಾವುದೆ ಚಟುವಟಿಕೆಯನ್ನು ನಡೆಸದಂತೆ, ಶೇ. 50ರಷ್ಟು ಮಾತ್ರ ಜನರು ಇರುವಂತೆ ಹಾಗೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು