ಕಾರವಾರ: ‘ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ. ವಿವಿಧ ತಾಲ್ಲೂಕುಗಳಲ್ಲಿಮಧ್ಯಾಹ್ನ 2ರಿಂದ ಜಾರಿಯಲ್ಲಿರುವ ಸ್ವಯಂಘೋಷಿತ ಲಾಕ್‌ಡೌನ್‌ಗೆ ಬೆಂಬಲವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಭಟ್ಕಳದಲ್ಲಿ ಮಾತ್ರ ಸರ್ಕಾರದ ಆದೇಶದಂತೆ ಮಧ್ಯಾಹ್ನ ಎರಡರಿಂದ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲಿ ಪರಿಸ್ಥಿತಿ ತಹಬದಿಗೆ ಬರುವವರೆಗೆ ಈ ಆದೇಶ ಮುಂದುವರಿಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೋವಿಡ್‌ನಿಂದ ಮೃತಪಟ್ಟವರ ಶವವನ್ನು ಸುಡಲು ಜನವಸತಿ ಇಲ್ಲದ ಪ್ರದೇಶದಲ್ಲಿ ಸ್ಥಳ ಗುರುತಿಸಲಾಗಿದೆ.ಯಲ್ಲಾಪುರ, ಭಟ್ಕಳದಲ್ಲಿ ರೋಗಿಗಳ ಮೃತಪಟ್ಟಾಗ ಯಾವುದೇ ಸಮಸ್ಯೆಗಳಿಲ್ಲದೇ ಶವಸಂಸ್ಕಾರ ಮಾಡಲಾಗಿದೆ. ಆದರೆ, ಕಾರವಾರದಲ್ಲಿ ವಿವಾದವಾಯಿತು.ಕೋವಿಡ್‌ನಂಥಸಂದರ್ಭದಲ್ಲಿ ಸಣ್ಣ ವಿಚಾರವನ್ನು ರಾಜಕೀಯಗೊಳಿಸಿ ಜಿಲ್ಲಾಡಳಿತಕ್ಕೆ ಸಮಸ್ಯೆ ಉಂಟು ಮಾಡಬೇಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಯಾರೇ ತೀರಿದರೂ ಅಂತ್ಯಸಂಸ್ಕಾರ ಮಾಡಲೇಬೇಕು. ಆ ಸಮಸ್ಯೆಗೆ ಪೂರ್ಣ ವಿರಾಮ ಹಾಕಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಪೈಕಿ 212 ಮಂದಿ ಭಟ್ಕಳದಲ್ಲೇ ಇದ್ದಾರೆ. ಬೇರೆ ದೇಶಗಳಿಂದ, ರಾಜ್ಯದಿಂದ ಬರುವವರು ಅಲ್ಲಿ ಅಧಿಕವಿದ್ದಾರೆ. ಹಾಗಾಗಿ ಇದು ಸಹಜವಾಗಿದೆ. ಆದ್ದರಿಂದಅಲ್ಲಿ ಕೋವಿಡ್ಪರೀಕ್ಷೆಗಳನ್ನು ವೇಗವಾಗಿ ಮಾಡಲು ತಿಳಿಸಲಾಗಿದೆ. ರೋಗಿಗಳ ಚಿಕಿತ್ಸೆಗೆ ಜಿಲ್ಲೆಯ ಎಲ್ಲ ಸರ್ಕಾರಿಆಸ್ಪತ್ರೆಗಳಲ್ಲಿ 2,500 ಹಾಸಿಗೆಗಳಿವೆ. ಕಾರವಾರದ ಪ್ರಯೋಗಾಲಯದಲ್ಲಿ ದಿನವೊಂದಕ್ಕೆ 900 ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಅದನ್ನು 1,200ಕ್ಕೇರಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

ಹುದ್ದೆಗಳ ಭರ್ತಿಗೆ ಅನುಮತಿ:‘ಜಿಲ್ಲೆಯಲ್ಲಿ ಖಾಲಿಯಿರುವ ಶುಷ್ರೂಷಕಿಯರ ಹುದ್ದೆಗಳನ್ನು ಗುತ್ತಿಗೆಆಧಾರದಲ್ಲಿಭರ್ತಿ ಮಾಡಲು ಆರೋಗ್ಯ ಇಲಾಖೆಯಿಂದ ಅನುಮತಿ ಸಿಕ್ಕಿದೆ. ಅಂತೆಯೇ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ,ಎದೆರೋಗ ತಜ್ಞರ ನೇಮಕಾತಿ ಮಾಡಲು ಕೇಳಲಾಗಿತ್ತು. ಇನ್ನೆರಡು ದಿನಗಳಲ್ಲಿ ಪ್ರಕ್ರಿಯೆ ಆರಂಭಿಸಲುಸಚಿವ ಡಾ.ಸುಧಾಕರ್ ಅನುಮತಿ ನೀಡಿದ್ದಾರೆ’ ಎಂದು ಶಿವರಾಮ ಹೆಬ್ಬಾರ ತಿಳಿಸಿದರು.

‘ಜಿಲ್ಲೆಗೆ 13 ಹೊಸ ಆಂಬುಲೆನ್ಸ್‌ಕೇಳಲಾಗಿದ್ದು, ಮುಖ್ಯಮಂತ್ರಿಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಜಿಲ್ಲೆಯ ಎಲ್ಲ ಶಾಸಕರ ಅನುದಾನದಿಂದಆಯಾ ವಿಧಾನಸಭಾ ಕ್ಷೇತ್ರಗಳಿಗೆ ತಲಾಎರಡು ಆಂಬುಲೆನ್ಸ್ಖರೀದಿಗೂತಾತ್ವಿಕ ಒಪ್ಪಿಗೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.