ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಗ್ರೀನ್ ವ್ಯಾಪ್ತಿಗೆ ಅನಾನಸ್

Last Updated 18 ಜುಲೈ 2020, 14:02 IST
ಅಕ್ಷರ ಗಾತ್ರ

ಶಿರಸಿ: ಕೇಂದ್ರ ಸರ್ಕಾರದ ಆಪರೇಷನ್ ಗ್ರೀನ್ ಯೋಜನೆಯು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಈ ಯೋಜನೆಯು ಜೂನ್ 16ರಿಂದ ಆರು ತಿಂಗಳುಗಳವರೆಗೆ ಜಾರಿಯಲ್ಲಿರುತ್ತದೆ.

ಈ ಯೋಜನೆಯ ಅವಧಿಯಲ್ಲಿ ಜಿಲ್ಲೆಯಿಂದ ದೂರದ ಮಾರುಕಟ್ಟೆಗೆ ಅನಾನಸ್ ಹಣ್ಣು ಸಾಗಾಟ ಮಾಡಿದ್ದಲ್ಲಿ, ಪ್ರತಿ ಟನ್ ಅನಾನಸ್‌ಗೆ, ಕಿಲೋ ಮೀಟರ್‌ವೊಂದಕ್ಕೆ ₹ 2.84, ಘಟಕ ವೆಚ್ಚಕ್ಕೆ ಶೇ 50ರ ಸಹಾಯಧನ, ಶೀತಲ ವಾಹನಕ್ಕೆ ಪ್ರತಿ ಟನ್‌ಗೆ ಕಿ.ಮೀ.ವೊಂದಕ್ಕೆ ₹ 5, ಘಟಕ ವೆಚ್ಚಕ್ಕೆ ಶೇ 50ರ ಸಹಾಯಧನ ಲಭ್ಯವಿದೆ. ರೈತ ಉತ್ಪಾದಕ ಸಂಸ್ಥೆಗಳು, ಸಹಕಾರ ಸಂಘಗಳು, ರೈತರಿಗೆ ಕನಿಷ್ಠ 100 ಟನ್ ಸಾಗಾಣಿಕೆ, ಕನಿಷ್ಠ 100 ಕಿ.ಮೀ, ಸಂಸ್ಕರಣಾ ಘಟಕ ಹೊಂದಿದವರು, ರಫ್ತುದಾರರು, ಲೈಸೆನ್ಸ್ ಹೊಂದಿರುವ ಕಮಿಷನ್ ಏಜೆಂಟರಿಗೆ ಕನಿಷ್ಠ 500 ಟನ್ ಸಾಗಾಣಿಕೆ, ಕನಿಷ್ಠ 100 ಕಿ.ಮೀ, ರಾಜ್ಯ ಮಾರಾಟ ಮಂಡಳಿ, ಚಿಲ್ಲರೆ ವ್ಯಾಪಾರಿಗಳಿಗೆ ಕನಿಷ್ಠ 1000 ಟನ್ ಸಾಗಾಣಿಕೆ, ಕನಿಷ್ಠ 250 ಕಿ.ಮೀ ದೂರ ನಿಗದಿಪಡಿಸಲಾಗಿದೆ.

ಒಬ್ಬ ಅರ್ಜಿದಾರರಿಗೆ ಗರಿಷ್ಠ ಸಹಾಯಧನದ ಮೊತ್ತ ₹ 1 ಕೋಟಿ ಆಗಿದೆ. ಸಾಗಾಣಿಕೆ ಮಾಡಿದ ಮೂರು ತಿಂಗಳು ದಾಟಿದವರು ಅರ್ಜಿ ನೀಡುವ ಅರ್ಹತೆ ಹೊಂದಿರುವುದಿಲ್ಲ. ಈ ಸೌಲಭ್ಯವನ್ನು https://www.sampada-mofpi.gov.in/ Login.aspx ಇಲ್ಲಿ ನೋಂದಾಯಿಸಿ, ಪಡೆಯಬಹುದು. ಹೆಚ್ಚಿನ ಮಾಹಿತಿಗೆ MoFPI (Ministry of Food Processing Industries) ಜಾಲತಾಣದ ಅಡಿಯಲ್ಲಿ ಆತ್ಮ ನಿರ್ಭರ್ ಭಾರತ ಘಟಕದಡಿಯಲ್ಲಿ ಪಡೆಯಬಹುದು ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT