ಶುಕ್ರವಾರ, ಅಕ್ಟೋಬರ್ 2, 2020
21 °C
ಆರೋಪಿಗಳಿಂದ ಅಪಾರ ಚಿನ್ನ, ₹ 61 ಲಕ್ಷ ವಶ

ಭಟ್ಕಳ: ಅಕ್ರಮವಾಗಿ ನಗ, ನಗದು ಸಾಗಣೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಪಟ್ಟಣದ ಹೂವಿನಚೌಕದ ಬಳಿ ಬುಧವಾರ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದಗಟ್ಟಿ, ಚಿನ್ನದ ಬಿಸ್ಕತ್ ಹಾಗೂ ನಗದು ಇಟ್ಟುಕೊಂಡು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 1,500 ಗ್ರಾಂ ತೂಕದ ಒಂದು ಚಿನ್ನದ ಬಿಸ್ಕತ್, ಎಂಟು ಚಿನ್ನದ ಗಟ್ಟಿ, ₹ 61 ಲಕ್ಷ ನಗದು, ₹ 10 ಲಕ್ಷ ಮೌಲ್ಯದ ಕಾರು ಹಾಗೂ ಎರಡು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಹುಬ್ಬಳ್ಳಿಯ ದುರ್ಗಬೈಲ್‌ ನಿವಾಸಿಗಳಾದ ಶೈಲೇಶ್ ಮಾದೇವ ಪಾಟೀಲ್ (33) ಹಾಗೂ ವಿಪುಲ್ ಸಂಜಯ ದೇಶಮುಖ್ (25) ಬಂಧಿತ ಆರೋಪಿಗಳು. ಶೈಲೇಶ್ ವೃತ್ತಿಯಲ್ಲಿ ಚಾಲಕ. ವಿಪುಲ್ ಮಹಾರಾಷ್ಟ್ರದ ಸತಾರದವನಾಗಿದ್ದು, ಪ್ರಸ್ತುತ ಹುಬ್ಬಳ್ಳಿ ದುರ್ಗದ ಬೈಲ್‌ನಲ್ಲಿ ಬಂಗಾರದ ಆಭರಣ ತಯಾರಿಸುವ ಮಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಭಟ್ಕಳ ಎ.ಎಸ್‌.ಪಿ ನಿಖಿಲ್.ಬಿ. ಮಾರ್ಗದರ್ಶನದಲ್ಲಿ ಸಿ.ಪಿ.ಐ ದಿವಾಕರ್, ಪಿ.ಎಸ್.ಐ.ಗಳಾದ ಭರತಕುಮಾರ್, ಎಚ್.ಬಿ.ಕುಡಗುಂಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು