ಮಂಗಳವಾರ, ಅಕ್ಟೋಬರ್ 22, 2019
26 °C

ತ್ರಿಬಲ್ ರೈಡಿಂಗ್: ಕಾರು ಮಾಲೀಕನಿಗೆ ದಂಡ !

Published:
Updated:

ಶಿರಸಿ: ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡಿದ ಪ್ರಕರಣದ ಆರೋಪದ ಮೇಲೆ ಪೊಲೀಸರು ಕಾರಿನ ಮಾಲೀಕರೊಬ್ಬರಿಗೆ ₹ 2000 ದಂಡ ಹಾಕಿದ್ದಾರೆ.

ಇಲ್ಲಿನ ನಿಲೇಕಣಿಯ ಪ್ರದೀಪ ನಾಯ್ಕ ಎಂಬುವವರಿಗೆ ಕಾರು ನಂಬರ್ ಸಹಿತ ದಂಡದ ಪಾವತಿ ಪತ್ರ ಮನೆಗೆ ಬಂದಿದೆ. ನಗರ ಠಾಣೆಯಿಂದ ನೀಡಿರುವ ಈ ಪತ್ರದಲ್ಲಿ ಯಾವ ಕಾರಣಕ್ಕಾಗಿ ದಂಡ ಹಾಗೂ ದಂಡದ ಮೊತ್ತವನ್ನು ನಮೂದಿಸಲಾಗಿದೆ.

‘ಪೊಲೀಸರ ತಪಾಸಣೆ ಎಷ್ಟೊಂದು ಅವೈಜ್ಞಾನಿಕ ಎಂಬುದಕ್ಕೆ ಈ ಪತ್ರ ಸಾಕ್ಷಿಯಾಗಿದೆ. ಬೈಕ್‌ಗೆ ಅನ್ವಯವಾಗುವ ನಿಯಮವನ್ನು ಕಾರಿಗೆ ಅನ್ವಯಿಸಿ, ದಂಡ ಹಾಕಲಾಗಿದೆ. ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದು ಕಡ್ಡಾಯವಾದಂತೆ, ಇಲಾಖೆ ಕೂಡ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ಮುಖ್ಯ’ ಎಂದು ಅವರು ಪ್ರತಿಕ್ರಿಯಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)