ಶಿರಸಿ: ಅಡಿಕೆ ಕಳುವು; ರೈತರೊಂದಿಗೆ ಪೊಲೀಸರ ಸಭೆ

ಶಿರಸಿ: ತಾಲ್ಲೂಕಿನ ಮಣ್ಕಣಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಡಿಕೆ ಕಳ್ಳತನ ಪ್ರಕರಣ ಯತ್ನ ನಡೆದ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಮತ್ತಿಗಾರ, ನೇರ್ಲವಳ್ಳಿ ಭಾಗದ ರೈತರೊಂದಿಗೆ ಸೋಮವಾರ ಕೊಳಗಿಬೀಸಿನಲ್ಲಿ ಜನಸಂಪರ್ಕ ಸಭೆ ನಡೆಸಿದರು.
‘ಕಳ್ಳತನ ಯತ್ನ ಪ್ರಕರಣ ಗಂಭಿರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಲಾಗುವದು. ರೈತರು ಆತಂಕಕ್ಕೆ ಒಳಗಾಗಬಾರದು’ ಎಂದು ಎಸ್ಐ ಡಿ.ಎಸ್.ಈರಯ್ಯ ಹೇಳಿದರು.
‘ಗ್ರಾಮಗಳಿಗೆ ಭೇಟಿ ನೀಡುವ ಅಪರಿಚಿತರು, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಬೇಕು. ಸಂಶಯಗಳಿದ್ದರೆ ತಕ್ಷಣವೆ ಪೊಲೀಸರಿಗೆ ಮಾಹಿತಿ ನೀಡಿ’ ಎಂದು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ನಿರಂತರ ಗಸ್ತು ತಿರುಗುವಂತಾಗಬೇಕು. ಒಬ್ಬ ಸಿಬ್ಬಂದಿ ಬದಲು ಹೆಚ್ಚು ಜನರನ್ನು ನೇಮಿಸಿ ಎಂದು ರೈತರು ಒತ್ತಾಯಿಸಿದರು.
ನೆಗ್ಗು ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಕಾಂತ ಹೆಗಡೆ ನೇರ್ಲದ್ದ, ಉಮಾಪತಿ ಭಟ್ ಮತ್ತಿಗಾರ, ಗುರುಪಾದ ಹೆಗಡೆ ಬೊಮ್ನಳ್ಳಿ, ರವಿ ಹೆಗಡೆ ಹೊಸ್ಮನೆ, ಶ್ರೀಧರ ಹೆಗಡೆ ಇಳ್ಳುಮನೆ, ಶ್ರಿಪತಿ ಹೆಗಡೆ ನೇರ್ಲದ್ದ, ಪೊಲೀಸ್ ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.