ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಾರಿಕಾಂಬೆ ಜಾತ್ರೆ ಪ್ರಕ್ರಿಯೆಗೆ ಚಾಲನೆ

Last Updated 26 ಜನವರಿ 2022, 16:06 IST
ಅಕ್ಷರ ಗಾತ್ರ

ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದೆನಿಸಿರುವ ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆಯ ಪೂರ್ವ ಸಿದ್ಧತಾ ಧಾರ್ಮಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಲಾಯಿತು.

ದೇವಸ್ಥಾನದ ಆಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆ 10.07ಕ್ಕೆ ದೇವಿಯ ಪ್ರತಿಷ್ಠಾ ಮಂಟಪ ಕಳಚಲಾಯಿತು. ದೇವಿ ಆಸೀನಳಾದ ಪೀಠದ ಸುತ್ತಲಿನ ಅಲಂಕೃತ ಸಾಮಗ್ರಿಗಳನ್ನು ತೆರವುಗೊಳಿಸುವುದರೊಂದಿಗೆ ಜಾತ್ರೆಯ ಸಿದ್ಧತೆಗೆ ಅಧಿಕೃತ ಮುದ್ರೆ ಒತ್ತಲಾಯಿತು. ಈ ವೇಳೆ ದೇವಸ್ಥಾನದ ಧರ್ಮದರ್ಶಿ ಮಂಡಳದವರು, ಬಾಬುದಾರರು, ಸಿಬ್ಬಂದಿ ಇದ್ದರು.

ಮಾ.15 ರಿಂದ 23ರ ವರೆಗೆ ಜಾತ್ರೆ ನಡೆಸಲು ಈಗಾಗಲೆ ನಿರ್ಣಯಿಸಲಾಗಿದೆ. ಅಲಂಕೃತ ಮಂಟಪ ವಿಸರ್ಜನೆಯ ಬಳಿಕ ನಡೆಯಲಿರುವ ಪೂರ್ವ ದಿಕ್ಕಿನ ಮೊದಲ ಹೊರಬೀಡು ಫೆ.22 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT