ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾನಸ್ ಸಾಲ ಮೊತ್ತ ಹೆಚ್ಚಳಕ್ಕೆ ಪ್ರಸ್ತಾವ

ಡಿ.ಸಿ ಅಧ್ಯಕ್ಷತೆಯಲ್ಲಿ ಜಿಲ್ಲಾ ತಾಂತ್ರಿಕ ಸಲಹಾ ಸಮಿತಿ ಸಭೆ
Last Updated 4 ಜನವರಿ 2022, 5:34 IST
ಅಕ್ಷರ ಗಾತ್ರ

ಶಿರಸಿ: ಅನಾನಸ್, ಭತ್ತ, ಹತ್ತಿ, ಮೆಕ್ಕೆಜೋಳಕ್ಕೆ ಈಗ ನೀಡುತ್ತಿರುವ ಬೆಳೆಸಾಲ ಪ್ರಮಾಣವನ್ನು ಸ್ವಲ್ಪ ಏರಿಕೆ ಮಾಡುವ ಕುರಿತು ರಾಜ್ಯಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲು ಸೋಮವಾರ ನಡೆದ ಜಿಲ್ಲಾ ತಾಂತ್ರಿಕ ಸಲಹಾ ಸಮಿತಿ (ಡಿಟಿಸಿ) ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಇಲ್ಲಿನ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ರೈತರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಹಣಕಾಸು ಯೋಜನೆ ಸಿದ್ಧಪಡಿಸುವ ಕುರಿತು ಚರ್ಚಿಸಿದರು.

ಪ್ರತಿ ಎಕರೆ ಅನಾನಸ್ ಬೆಳೆಯುವ ಪ್ರದೇಶಕ್ಕೆ ರೈತರಿಗೆ ತಲಾ ₹45 ಸಾವಿರ ಬೆಳೆಸಾಲ ನೀಡಲಾಗುತ್ತಿದ್ದು, ಅದನ್ನು ₹50 ಸಾವಿರಕ್ಕೆ ಏರಿಕೆ ಮಾಡಬೇಕು. ಹತ್ತಿಗೆ ₹20ರ ಬದಲಾಗಿ ₹25 ಸಾವಿರ ನಿಗದಿಪಡಿಸಬೇಕು. ಭತ್ತ ಮತ್ತು ಮೆಕ್ಕೆಜೋಳಕ್ಕೆ ಸದ್ಯ ₹25 ಸಾವಿರ ಹಂಚಿಕೆ ಮಾಡಲಾಗುತ್ತಿದ್ದು, ಇದನ್ನು ₹1 ಸಾವಿರಕ್ಕೆ ಏರಿಸಿ, ₹26 ಸಾವಿರ ನೀಡಬೇಕು ಎಂಬ ಪ್ರಸ್ತಾವ ಕಳುಹಿಸಲು ಸಭೆ ಸಮ್ಮಿತಿಸಿತು.

ಸಭೆಯಲ್ಲಿ ಕೆ.ಡಿ‌.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್, ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT