ಶನಿವಾರ, ಏಪ್ರಿಲ್ 4, 2020
19 °C

ವೇಶ್ಯಾವಾಟಿಕೆ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಮನೆಯೊಂದರಲ್ಲಿ ವೇಶ್ಯವಾಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ಮಾರುಕಟ್ಟೆ ಠಾಣೆಯ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮರಾಠಿಕೊಪ್ಪದ ಸಾವಿತ್ರಿ ಭಟ್ (56), ಅಗಸೇಬಾಗಿಲಿನ ರಾಮಚಂದ್ರ ಗಜಾನನ ನಾಯ್ಕ (59), ಹೊನ್ನಾವರದ ಲಕ್ಷ್ಮೀಕಾಂತ ನಾಯ್ಕ (22), ಹುಬ್ಬಳ್ಳೀಯ ಆನಂದ ರೋಣಿಮಠ (57) ಬಂಧಿತ ಆರೋಪಿಗಳು. ಇವರಿಂದ ₹ 2850 ನಗದು, ನಾಲ್ಕು ಮೊಬೈಲ್ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾವಿತ್ರಿ ಭಟ್ ಹಾಗೂ ರಾಮಚಂದ್ರ ನಾಯ್ಕ ಹಣ ಗಳಿಸುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ.ಯು ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆಯ ಪಿಎಸ್‌ಐ ನಾಗಪ್ಪ, ಸಿಬ್ಬಂದಿ ಗೀತಾ ಕಲಘಟಗಿ, ಮಹಾಂತೇಶ ಬಾರಿಕೇರ, ಸುರೇಶ ಗೊಂಜಾಲಿ, ರಾಮಯ್ಯ ಪೂಜಾರಿ, ವೆಂಕಟೇಶ ನಯಕ, ದೇವರಾಜ ನಾಯಕ, ಪ್ರದೀಪ ಕೈಟಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)