ಕುಮಟಾ: ಬಡ ಮಹಿಳೆಯರಿಗೆ ಸಾಧ್ಯವಾದ ಮಟ್ಟಿಗೆ ಸಹಾಯ ಮಾಡುವ ಉದ್ದೇಶದಿಂದ ಪಟ್ಟಣದಲ್ಲಿ ಸ್ಥಾಪನೆಯಾದ ಶ್ರೀರಕ್ಷಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಕ್ಕೀಗ ಹತ್ತರ ಹರೆಯ.

ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೂ ಆಗಿರುವ ವಕೀಲರಾದ ಸುಧಾ ಗೌಡ ಅವರು ಈ ಸಂಘವನ್ನು ಹುಟ್ಟುಹಾಕಿದ್ದರು. ಈಗ ಒಂದು ಸಾವಿರಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡು ಬೆಳೆದಿದೆ. ಮೂರು ವರ್ಷಗಳಿಂದ ಲಾಭದಲ್ಲಿ ವ್ಯವಹರಿಸುತ್ತಿದ್ದು, ದಶಮಾನೋತ್ಸದ ಸಂದರ್ಭದಲ್ಲಿ ತನ್ನ ಸದಸ್ಯರಿಗೆ ಲಾಭಾಂಶದ ಸಿಹಿ ಕೂಡ ಹಂಚಿದೆ.

‘ನನ್ನ ಕಕ್ಷಿದಾರರು ಸೇರಿದಂತೆ ಅನೇಕ ಬಡ ಮಹಿಳೆಯರು ಸಹಾಯ ಕೇಳಿಕೊಂಡು ಬರುತ್ತಿದ್ದರು. ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸಹಾಯ ಕೇಳಿ ಬರುವ ಕಷ್ಟದಲ್ಲಿರುವ ಮಹಿಳೆಯರನ್ನೇ ಸೇರಿಸಿಕೊಂಡು ಸಹಕಾರ ಸಂಘ ಸ್ಥಾಪಿಸಿದೆ. ಎಲ್ಲವೂ ನಿರೀಕ್ಷೆಯಂತೆ ನಡೆಯಿತು’ ಎನ್ನುತ್ತಾರೆ ಸಂಘದ ಸಂಸ್ಥಾಪಕ ಅಧ್ಯಕ್ಷೆ ಸುಧಾ ಗೌಡ.

‘ಇಬ್ಬರು ಪರಿಚಿತ ವ್ಯಕ್ತಿಗಳ ಜಾಮೀನು ನೀಡಿ ಸಂಘದ ಸದಸ್ಯರಿಗೆ ₹ 25 ಸಾವಿರದವರೆಗೆ ಸಾಲ ನೀಡುತ್ತೇವೆ. ಅದಕ್ಕೂ ಹೆಚ್ಚಿನ ಮೊತ್ತದ ಸಾಲ ಅಗತ್ಯವಿದ್ದರೆ ಸರ್ಕಾರಿ ನೌಕರರ ಜಾಮೀನು, ಎಲ್.ಐ.ಸಿ ಬಾಂಡ್ ಅಗತ್ಯ. ಸಂಘದಿಂದ ವಿವಿಧ ಉದ್ದೇಶಕ್ಕೆ ₹ 43.50 ಲಕ್ಷ ಸಾಲ ನೀಡಿದ್ದೇವೆ. ಈ ವರ್ಷ ₹ 1.69 ಲಕ್ಷ ಲಾಭ ಗಳಿಸಿದ್ದೇವೆ. ಕೋವಿಡ್ನ ಆರ್ಥಿಕ ಸಂಕಷ್ಟ ಸಂದರ್ಭದಲ್ಲೂ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡಲಾಗಿದೆ. ಕೋವಿಡ್ ಕಾರಣದಿಂದ ದಶಮಾನೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ’ ಎಂದು ವಿವರಿಸುತ್ತಾರೆ.

ಮೌಲ್ಯ ಬಿತ್ತಿದರೆ ಕೇಸರೀಕರಣ ಪಟ್ಟ: ಪ್ರಲ್ಹಾದ ಜೋಶಿ

ಆರ್ಥಿಕ ನೆರವು:‘ನಮ್ಮ ಸಂಘದಲ್ಲಿ ಸಾಲ ಪಡೆದ ಮಹಿಳೆಯರು ಇಂದು ಕೇಟರಿಂಗ್ ವ್ಯವಹಾರದ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಹೆಚ್ಚಿನ ಮಹಿಳೆಯರು ಸಂತೆ ಮಾರುಕಟ್ಟೆ ಹಾಗೂ ರಸ್ತೆ ಬದಿ ತರಕಾರಿ, ಹೂವು, ಹಣ್ಣು ವ್ಯಾಪಾರ ಮಾಡಿ ಬದುಕು ಕಂಡುಕೊಂಡಿದ್ದಾರೆ. ಕ್ಯಾನ್ಸರ್ ಸೇರಿದಂತೆ ತೀರಾ ಅನಾರೋಗ್ಯ ಪೀಡಿತ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅತಿ ಹೆಚ್ಚು ಮೊತ್ತದ ಸಾಲ ನೀಡಲಾಗಿದೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷೆ ಸುಧಾ ಗೌಡ ಹೆಮ್ಮೆಯಿಂದ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.