ಶನಿವಾರ, ಜುಲೈ 24, 2021
23 °C

ಶಿರಸಿ: ಪಿಯುಸಿ ಫಲಿತಾಂಶದಲ್ಲಿ ಶ್ರೀನಿಕೇತನ ಶಾಲೆಗೆ ಶೇ 100 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದ ರಾಜರಾಜೇಶ್ವರಿ ವಿದ್ಯಾಸಂಸ್ಥೆ ನಡೆಸುತ್ತಿರುವ ಕೇಂದ್ರೀಯ ಪಠ್ಯಕ್ರಮದ ಶ್ರೀನಿಕೇತನ ಶಾಲೆಯ 10ನೇ ತರಗತಿ ಫಲಿತಾಂಶ ಶೇ 100ರಷ್ಟಾಗಿದೆ. ಸತತ ಐದನೇ ವರ್ಷವೂ ಈ ಫಲಿತಾಂಶ ದೊರೆತಿದೆ. 

ತೇಜಸ್ವಿ ವಿನಾಯಕ ಹೆಗಡೆ (ಶೇ 97.6) ಪ್ರಥಮ, ವಿಜೇತಾ ನಾಗರಾಜ ಭಟ್ಟ (ಶೇ 96.4) ದ್ವಿತೀಯ, ಪ್ರಣವ್ ಅನಂತ ರಾವ್ (ಶೇ 96) ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 37 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ, 11 ಜನರು ಶೇ 80ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಸಂಸ್ಕೃತದಲ್ಲಿ ಎಂಟು ಮಕ್ಕಳು, ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ ಒಬ್ಬರು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು