ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಂದ ಸ್ಕೇಟಿಂಗ್ ಮೂಲಕ ಕರ್ಫ್ಯೂ ಜಾಗೃತಿ

Last Updated 21 ಮಾರ್ಚ್ 2020, 13:32 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ‌ ವೈರಾಣು ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಬಗ್ಗೆ ಇಲ್ಲಿನ ಅದ್ವೈತ ಸ್ಕೇಟರ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ವಿದ್ಯಾರ್ಥಿಗಳು ಶನಿವಾರ ಜಾಗೃತಿ ಮೂಡಿಸಿದರು.

ಸ್ಕೇಟ್ ಮಾಡುತ್ತಲೇ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮಕ್ಕಳು, ಜನರಿಗೆ ಕರಪತ್ರ ವಿತರಿಸಿದರು. ಪೌರಾಯುಕ್ತ ರಮೇಶ ನಾಯಕ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಾದ ಅದ್ವೈತ, ನಿತಿಶ್, ಕುಶಾಲ್, ರೋಹಿತ್, ಪ್ರತಿಕ್, ಕುಮಾರ, ಗಗನ, ವಿಪುಲ್, ರಾಜುಗುರು ಭಾಗವಹಿಸಿದ್ದರು. ಬೈಕ್ ಸವಾರರು, ಆಟೊರಿಕ್ಷಾ ಚಾಲಕರು, ಬಟ್ಟೆ ಅಂಗಡಿ ಹೀಗೆ ದಾರಿಯಲ್ಲಿ ಸಿಕ್ಕವರಿಗೆಲ್ಲ ಕರಪತ್ರ ನೀಡಿದರು.

ನಗರಸಭೆ ಸದಸ್ಯೆ ವೀಣಾ ಶೆಟ್ಟಿ, ಅದ್ವೈತ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷ ಕಿರಣಕುಮಾರ, ತರಬೇತುದಾರರಾದ ಶ್ಯಾಮಸುಂದರ, ಸುನೀಲ ನಾಯ್ಕ, ವಿಶ್ವನಾಥ ‌ಹಾಗೂ ಅನೇಕ ಪಾಲಕರು ಸಾರ್ವಜನಿಕರಿಗೆ ಕರಪತ್ರವನ್ನು ನೀಡುವುದರ‌‌ ಮೂಲಕ ಜಾತಾದೊಂದಿಗೆ‌ವರು ಜಾಥಾದೊಂದಿಗೆ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT