ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಪ್ರಗತಿ ಕಾಣದ ನೀರಿನ ಕರ ಸಂಗ್ರಹಣೆ

ಜಾಕ್‍ವೆಲ್ ದುರಸ್ಥಿಗೆ ಲಕ್ಷಾಂತರ ನಿರ್ವಹಣಾ ವೆಚ್ಚ ಭರಿಸುವ ಸವಾಲು
Last Updated 29 ಜುಲೈ 2021, 5:25 IST
ಅಕ್ಷರ ಗಾತ್ರ

ಶಿರಸಿ: ನಗರದಲ್ಲಿ ದಿನದ ಇಪ್ಪತ್ನಾಲ್ಕು ತಾಸು ನೀರು ಪೂರೈಕೆಗೆ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಆದರೆ, ಈಗಾಗಲೆ ಜಾರಿಯಲ್ಲಿರುವ ನೀರು ಪೂರೈಕೆ ಯೋಜನೆ ನಿರ್ವಹಣೆ ನಗರಸಭೆಗೆ ಸವಾಲಾಗಿ ಪರಿಣಿಮಿಸಿದೆ.

ಪ್ರತಿ ವರ್ಷ ನೀರಿನ ಕರ ಸಂಗ್ರಹದಲ್ಲಿ ನಗರಸಭೆ ಹಿಂದೆ ಬೀಳುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಸಾಧಿಸುತ್ತಿರುವ ಗುರಿ ನೀರಿನ ಕರದ ವಿಚಾರದಲ್ಲಿ ಪ್ರಗತಿ ಕಾಣುತ್ತಿಲ್ಲ. ಹತ್ತು ಸಾವಿರಕ್ಕೂ ಹೆಚ್ಚು ನಳ ಸಂಪರ್ಕ ಇದ್ದು ಪ್ರತಿನಿತ್ಯ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುತ್ತಿದೆ.

ಪ್ರತಿ ಬಾರಿ ಮಳೆಗೆ ಕುಡಿಯುವ ನೀರು ಪೂರೈಸುವ ಮಾರಿಗದ್ದೆ ಮತ್ತು ಕೆಂಗ್ರೆ ಹೊಳೆಯ ತಟದಲ್ಲಿರುವ ಜಾಕ್‍ವೆಲ್‍ಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ. ನಾಲ್ಕಾರು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಕಾಣುತ್ತದೆ. ಅವುಗಳ ದುರಸ್ಥಿಗೆ ಲಕ್ಷಾಂತರ ವೆಚ್ಚವಾಗುತ್ತಿದೆ.

‘ನದಿಗಳು ಉಕ್ಕೇರಿ ಕುಡಿಯುವ ನೀರು ಪೂರೈಸಲು ಪಂಪ್ ಮಾಡುವ ಯಂತ್ರೋಪಕರಣಗಳಿಗೆ ಹಾನಿಯುಂಟಾಗುವುದು ಪ್ರತಿ ವರ್ಷ ನಡೆಯುತ್ತವೆ. ಆಗ ನಿರ್ವಹಣೆಗೆ ಲಕ್ಷಾಂತರ ವೆಚ್ಚ ತಗಲುತ್ತದೆ. ನೀರಿನ ತೆರಿಗೆಯ ಹಣದಲ್ಲಿ ಅವುಗಳ ದುರಸ್ಥಿಗೆ ಕ್ರಮವಾಗಬೇಕು. ಆದರೆ, ಕಡಿಮೆ ಆದಾಯ ಅಡ್ಡಿಯಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಸಮಸ್ಯೆ ತಿಳಿಸಿದರು.

‘2020–21ನೇ ಸಾಲಿನ ಆರ್ಥಿಕ ವರ್ಷಕ್ಕೆ ₹ 139.28 ಲಕ್ಷ ಕರ ಸಂಗ್ರಹಣೆ ಬಾಕಿ ಇದ್ದು, ಈ ವರ್ಷದ ತೆರಿಗೆಯೂ ಸೇರಿ ₹ 208.39 ಲಕ್ಷ ನೀರಿನ ತೆರಿಗೆ ಸಂಗ್ರಹಗೊಳ್ಳಬೇಕಿದೆ. ಈ ಪೈಕಿ ಸದ್ಯದವರೆಗೆ ₹ 39.76 ಲಕ್ಷ ವಸೂಲಾಗಿದೆ. ಇನ್ನೂ ₹ 168.63 ಲಕ್ಷ ತೆರಿಗೆ ಮೊತ್ತ ಸಾರ್ವಜನಿಕರಿಂದ ಪಾವತಿಯಾಗಬೇಕು’ ಎಂದು ಪೌರಾಯುಕ್ತ ಕೇಶವ ಚೌಗುಲೆ ಮಾಹಿತಿ ನೀಡಿದರು.

‘ನೀರಿನ ಕರ ಸಂಗ್ರಹದಲ್ಲಿ ಹಿಂದೆ ಬಿದ್ದಿರುವುದು ನಿಜ.ಮಾಸಿಕ ಅಲ್ಪ ಮೊತ್ತ ತಗುಲಬಹುದಾದರೂ, ನಳ ಸಂಪರ್ಕ ಹೊಂದಿರುವವರ ಪೈಕಿ ಬಹುತೇಕರು ಕರ ಪಾವತಿಗೆ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಸಮಸ್ಯೆ ಹೇಳಿದರು.

‘ಪ್ರತಿದಿನ ನೀರು ಪೂರೈಸುವಂತಾಗಲು ನಿರ್ವಹಣೆ ಅಚ್ಚುಕಟ್ಟಾಗಿರಬೇಕು. ಅದಕ್ಕೆ ಅಗತ್ಯ ಆದಾಯ ಸಂಗ್ರಹವಾಗುತ್ತಿರಬೇಕು. ಹೀಗಾಗಿ ಜನರು ನಿಗದಿತ ಸಮಯಕ್ಕೆ ಕರ ಪಾವತಿಸುವುದು ಅನುಕೂಲ’ ಎನ್ನುತ್ತಾರೆ ಅವರು.

‘ನೀರಿನ ತೆರಿಗೆ ಸಂಗ್ರಹ ಪ್ರಕ್ರಿಯೆಗೆ ಚುರುಕು ಮುಟ್ಟಿಸಲಿದ್ದೇವೆ. ಬಾಕಿ ಇದ್ದರೆ ಅವರ ಮನೆಗೆ ಬಿಲ್ ಕಲೆಕ್ಟರ್‌ಗಳು ತೆರಳಿ ವಸೂಲಿ ಮಾಡುತ್ತಾರೆ’ ಎಂದು ತಿಳಿಸಿದರು.

–––––

ತೆರಿಗೆ–ಬೇಡಿಕೆ (₹ ಲಕ್ಷಗಳಲ್ಲಿ);ವಸೂಲಾತಿ;ಬಾಕಿ
ಆಸ್ತಿ–
₹ 324.14; ₹ 141.80; ₹ 182.34
ನೀರು– ₹208.39; ₹ 39.76; ₹ 168.63
ಮಳಿಗೆ ಬಾಡಿಗೆ– ₹ 311.01; ₹ 6.36; ₹ 304.65

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT