ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಾರಾತ್ಮಕ ಸಂಗತಿಗಳತ್ತ ಗಮನ ಸಲ್ಲದು: ಜಿ.ಪಂ ಸಿಇಒ ಮೊಹಮ್ಮದ್ ರೋಶನ್

ಅಸ್ನೋಟಿಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
Last Updated 8 ನವೆಂಬರ್ 2019, 12:02 IST
ಅಕ್ಷರ ಗಾತ್ರ

ಕಾರವಾರ: ‘ಜೀವನದಲ್ಲಿ ನಕಾರಾತ್ಮಕ ಸಂಗತಿಗಳ ಕಡೆಗೆ ಗಮನ ಕೊಡಬಾರದು. ಸೋಲುಗಳ ಬಗ್ಗೆ ಚಿಂತಿಸದೇ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಛಲ ಇರಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಹೇಳಿದರು.

ತಾಲ್ಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಸ್ಮಾರ್ಟ್ ಕ್ಲಾಸ್’ ಉದ್ಘಾಟನೆ ಮತ್ತು ‘ಶಿಕ್ಷಣ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಂತ್ರಜ್ಞಾನ ಆಧಾರಿತ ಶಿಕ್ಷಣ ವ್ಯವಸ್ಥೆಯಿಂದ ಪರಿಣಾಮಕಾರಿ ಬೋಧನೆ ಸಾಧ್ಯವಾಗಲಿದೆ.ವಿದ್ಯಾರ್ಥಿಗಳು ಸ್ಪಷ್ಟ ಗುರಿ ಮತ್ತು ಏಕಾಗ್ರತೆಹೊಂದಿ ತಮ್ಮ ವಿದ್ಯಾಭ್ಯಾಸಕ್ಕೆಆದ್ಯತೆನೀಡಬೇಕು’ ಎಂದು ಕಿವಿಮಾತು ಹೇಳಿದರು.

ಪ್ರೇಮಾಶ್ರಮ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಡಾ.ಅನಿಲ ಗಾಂವಕರ್ ಮಾತನಾಡಿ, ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸ್ಮಾರ್ಟ್ ಮಾದರಿಯ ಶಿಕ್ಷಣ ನೀಡುವ ಮೂಲಕ ಸಾಕ್ಷರತೆಯಪ್ರಮಾಣವನ್ನು ಗಮನಾರ್ಹ ರೀತಿಯಲ್ಲಿ ಹೆಚ್ಚಿಸಲುಸಾಧ್ಯವಿದೆ’ ಎಂದು ಹೇಳಿದರು.

ಸಮಾಜ ಸೇವಕ ಆರ್.ಜಿ.ಪ್ರಭು, ನಗರಸಭೆ ಎಂಜಿನಿಯರ್ ಕೆ.ಎಂ.ಮೋಹನರಾಜ್ಮಾತನಾಡಿದರು.ಅಸ್ನೋಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂಜಯ ಸಾಳುಂಕೆ, ಅಸ್ನೋಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಇಬ್ರಾಹಿಂ ಕಲ್ಲೂರ್, ಅಲ್ತಾಫ್ ಶೇಖ್, ಪ್ರಜೀತ್ ಪಿ.ವಿ. ಇದ್ದರು. ವಿದ್ಯಾಮಂದಿರದ ಮುಖ್ಯ ಶಿಕ್ಷಕ ದಿನೇಶ ಗಾಂವಕರ್ ಸ್ವಾಗತಿಸಿದರು. ಶಿಕ್ಷಕ ಗಣೇಶ್ ಭಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು. ಪ್ರಣೀತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಮೊದಲ ಪ್ರಶಸ್ತಿ ಪ್ರದಾನ:ಶಿಕ್ಷಣ ಕ್ಷೇತ್ರಕ್ಕೆಉತ್ತಮ ಸೇವೆ ನೀಡಿದವರನ್ನುಅಸ್ನೋಟಿ ಶಿಕ್ಷಣ ಸಂಸ್ಥೆಯಯು ಈ ವರ್ಷದಿಂದಗುರುತಿಸಿ ಪುರಸ್ಕರಿಸಲಿದೆ.

ಇದಕ್ಕಾಗಿ ‘ಶಿಕ್ಷಣ ಸೇವಾ ರತ್ನ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದು, ಸಮಾಜ ಸೇವಕ ಆರ್.ಜಿ.ಪ್ರಭು ಈ ಪ್ರಶಸ್ತಿಗಾಗಿ ₹50 ಸಾವಿರ ದತ್ತಿನಿಧಿ ನೀಡಿದ್ದಾರೆ. ಮೊದಲ ವರ್ಷದ ಪ್ರಶಸ್ತಿಯನ್ನು ಸಮಿತಿಯವರೇ ನೀಡಿದ್ದು, ಶುಕ್ರವಾರ ಜರುಗಿದ ಸಮಾರಂಭದಲ್ಲಿ ಶಿಕ್ಷಣ ಪ್ರೇಮಿಯೂ ಆಗಿರುವ ಉದ್ಯಮಿ ಇಬ್ರಾಹಿಂ ಕಲ್ಲೂರ್ ಅವರಿಗೆ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT