ಶನಿವಾರ, ಮಾರ್ಚ್ 25, 2023
22 °C
ಬೆಳ್ಳೇಕೇರಿ ಹಬ್ಬ

ಊರಿನ ಅಭಿಮಾನ ಜಾಗೃತವಾಗಿರಲಿ: ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಗರ ಸಂಸ್ಕೃತಿಗೆ ಒಗ್ಗಿಕೊಂಡವರು ಊರಿನ ಅಭಿಮಾನ ಮರೆಯುತ್ತಿರುವದು ವಿಷಾದಕರ. ಪ್ರತಿ ವ್ಯಕ್ತಿಗೂ ತನ್ನ ಊರಿನ ಕುರಿತಾದ ಅಭಿಮಾನ ಜಾಗೃತವಾಗಿರಬೇಕು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಬೆಳ್ಳೆಕೇರಿ ಗ್ರಾಮದಲ್ಲಿ ಭಾನುವಾರ ಗಜಾನನ ಯುವಕ‌ ಮಂಡಳಿಯ ನಾಲ್ಕನೆ  ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೆಳ್ಳೇಕೇರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವೈಯಕ್ತಿ ಹಿತಕ್ಕಿಂತ ಸಾಮೂಹಿಕ‌ ಸಂಕಲ್ಪ ಶಕ್ತಿ ಊರಿನ ಯಶಸ್ಸು, ಅಭಿವೃದ್ದಿ, ಸವಾಲು ಎದುರಿಸಲು ಸಾಧ್ಯವಾಗುತ್ತದೆ. ಊರಿನ ಮೂಲತನವನ್ನು ಕಾಪಿಟ್ಟುಕೊಳ್ಳುವ ಸವಾಲನ್ನು ಸಾಂಘಿಕ ಯತ್ನದ ಮೂಲಕ ಸಾಧ್ಯವಾಗಿಸಬಹುದು ಎಂಬುದಕ್ಕೆ ಈ ಹಬ್ಬ ಮಾದರಿ’ ಎಂದರು.

ಯುವಕ ಸಂಘದ ಅಧ್ಯಕ್ಷ ಎಂ.ಡಿ.ಹೆಗಡೆ ಬೆಳ್ಳೇಕೆರಿ ಅಧ್ಯಕ್ಷತೆ ವಹಿಸಿದ್ದರು. ರಘುಪತಿ ಹೆಗಡೆ, ವಿಜ್ಞಾನಿ ಪ್ರಭಾಕರ ಭಟ್ಟ ತಟ್ಟೀಕೈ, ಎಂ.ಎನ್.ಹೆಗಡೆ‌ ಮುಂಡಗೇಸರ, ಆರ್.ವಿ.ಭಾಗವತ ಶಿರಸಿಮಕ್ಕಿ‌ ಇತರರು ಇದ್ದರು.

ಜಿ.ಆರ್.ಹೆಗಡೆ ಬೆಳ್ಳೇಕೇರಿ ಸ್ವಾಗತಿಸಿದರು. ವಿಘ್ನೇಶ್ವರ ಹೆಗಡೆ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತ್ ಬೆಳ್ಳೇಕೇರಿ ನಿರ್ವಹಿಸಿದರು. ಕಮಲಾಕರ ಭಟ್ಟ ವಂದಿಸಿದರು.

ಸನ್ಮಾನ, ವಸ್ತು ಪ್ರದರ್ಶನ: ಊರಿನ ಹಿರಿಯರಾದ‌ ಧನಂಜಯ ಹೆಗಡೆ, ಲಕ್ಷ್ಮೀ ಹೆಗಡೆ, ರಘುಪತಿ ಹೆಗಡೆ, ಲಕ್ಷ್ಮೀ‌ ಭಟ್ಟ, ಅನುಸೂಯಾ ಹೆಗಡೆ, ಗಂಗಾ‌ ಹೆಗಡೆ, ಅರುಂಧತಿ ಹೆಗಡೆ, ಮಹಾಬಲೇಶ್ವರ ಭಟ್ಟ, ಸಾವಿತ್ರಿ‌ ಭಟ್ಟ ಅವರನ್ನು ಗೌರವಿಸಲಾಯಿತು.

ಗ್ರಾಮದ ಮನೆಗಳಲ್ಲಿರುವ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ಯುವಕ‌ ಮಂಡಳಿಯ ನಾಲ್ಕು ದಶಕಗಳ ಸಂಘ ಶಕ್ತಿ ಹೊತ್ತಿಗೆ ಹಾಗೂ ಬೆಳ್ಳೇಕೇರಿ ಡಾಟ್ ಕಾಮ್ ವೆಬ್ ಸೈಟ್ ಕೂಡ ಬಿಡುಗಡೆಗೊಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು