ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆಯ ವಿಶೇಷ ರೈಲು ಸಂಚಾರ

Last Updated 22 ಏಪ್ರಿಲ್ 2020, 12:43 IST
ಅಕ್ಷರ ಗಾತ್ರ

ಕಾರವಾರ: ಸರಕು ಸಾಗಣೆಯ ಮತ್ತೊಂದುವಿಶೇಷ ರೈಲು ಏ.27ರಂದು ಗುಜರಾತ್‌ನ ಓಖಾದಿಂದ ಕೇರಳದ ತಿರುವನಂತಪುರದವರೆಗೆ ಸಂಚರಿಸಲಿದೆ. ಅದಕ್ಕೆ ಉಡುಪಿ ಮತ್ತು ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆಯಿದೆ.

ಅಗತ್ಯ ವಸ್ತುಗಳನ್ನು ಸಾಗಿಸುವ ಸಲುವಾಗಿ 00933 ಸಂಖ್ಯೆಯ ರೈಲು ಓಖಾದಿಂದ ಮಧ್ಯಾಹ್ನ 1.10ಕ್ಕೆ ಸಂಚಾರ ಆರಂಭಿಸಲಿದೆ. ಏ.29ರಂದು ಮಧ್ಯಾಹ್ನ 12ಕ್ಕೆ ತಿರುವನಂತಪುರ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತಲುಪಲಿದೆ. ಅಲ್ಲಿಂದ 29ಕ್ಕೆ ಹೊರಡುವ 00934 ಸಂಖ್ಯೆ ರೈಲು ಮೇ 1ರಂದು ರಾತ್ರಿ 9.40ಕ್ಕೆ ಓಖಾ ತಲುಪಲಿದೆ.

ಈ ರೈಲಿನ ಮೂಲಕ ಅಗತ್ಯ ಸರಕುಗಳನ್ನು ತರಿಸಿಕೊಳ್ಳಲು ಬಯಸುವವರು ಉಡುಪಿ ಅಥವಾ ಮಡಗಾಂವ್‌ನ ಕೊಂಕಣ ರೈಲ್ವೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT