ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

Last Updated 22 ಜನವರಿ 2020, 14:00 IST
ಅಕ್ಷರ ಗಾತ್ರ

ಶಿರಸಿ: ಕಿಡ್ನಿಯಲ್ಲಿ ದುರ್ಮಾಂಸ ಸಹಿತ ಕಲ್ಲು ಬೆಳೆದ ಕಾರಣ ತೀವ್ರ ನೋವು ಅನುಭವಿಸುತ್ತಿದ್ದ ಮಹಿಳೆಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ, ರೋಗಿ ಗುಣಮುಖರಾಗುವಂತೆ ಮಾಡಿದೆ.

ಸುಜಾತಾ (35) ಎನ್ನುವವರು ಕಿಡ್ನಿ ಕಲ್ಲಿನಿಂದಾಗಿ ಯಾತನೆ ಅನುಭವಿಸುತ್ತಿದ್ದರು. ಪರೀಕ್ಷೆ ಮಾಡಿಸಿಕೊಳ್ಳಲು ಪಂಡಿತ ಆಸ್ಪತ್ರೆಯ ಡಾ.ಗಜಾನನ ಭಟ್ಟ ಅವರ ಬಂದಾಗ ಅವರು, ಕಿಡ್ನಿಯಲ್ಲಿ ದುರ್ಮಾಂಸ ಬೆಳೆದಿರುವುದನ್ನು ಪತ್ತೆ ಮಾಡಿದರು. ಮಂಗಳವಾರ ಸತತ ಮೂರು ತಾಸು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ, ಸುಮಾರು 1.5 ಕೆ.ಜಿ ತೂಕದ ದುರ್ಮಾಂಸವನ್ನು ಹೊರತೆಗೆದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಗೆ ₹ 1.5 ಲಕ್ಷದಷ್ಟು ವೆಚ್ಚವಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಡಾ. ಗಜಾನನ ಭಟ್ಟ ನೇತೃತ್ವದಲ್ಲಿ ವೈದ್ಯರಾದ ವಿಶ್ವನಾಥ ರೇವಣಕರ್, ಬಸನಗೌಡ, ಪದ್ಮಿನಿ ಪೈ, ಶುಶ್ರೂಷಕರಾದ ಜಾಯ್ ಬೆರೆಟ್ಟೊ, ಸುಜಾತಾ, ಸಿಬ್ಬಂದಿ ನರಸಿಂಹ ಅವರು ಶಸ್ತ್ರಚಿಕಿತ್ಸೆಗೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT