ಬುಧವಾರ, ಜುಲೈ 28, 2021
28 °C
ಚಾತುರ್ಮಾಸ್ಯ ವ್ರತ ಸಂಕಲ್ಪ

ಸ್ವರ್ಣವಲ್ಲಿ ಶ್ರೀಗಳಿಂದ ವ್ಯಾಸ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಗುರುಪೂರ್ಣಿಮೆಯ ದಿನ ಭಾನುವಾರ ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಕೈಗೊಂಡರು.

ಸ್ವಾಮೀಜಿ ವ್ಯಾಸ ಪೂಜೆ ನೆರವೇರಿಸಿದರು. ಜಗದ್ಗುರು ಶ್ರೀಕೃಷ್ಣನನ್ನು ಗೋಪಾಲಕೃಷ್ಣನ ರೂಪದಲ್ಲಿ ಪೂಜಿಸಿದರು. ವಾರ್ಷಿಕ ಪದ್ಧತಿಯಂತೆ ಮಠದ ಆಡಳಿತ ಮಂಡಳಿಯ ಅಧ್ಯಕ್ಷರು ಸಮಸ್ತ ಶಿಷ್ಯ- ಭಕ್ತರ ಪರವಾಗಿ ಶ್ರೀಗಳ ಪಾದಪೂಜೆ ನಡೆಸಿದರು‌.

ವರ್ಷದ ಎಲ್ಲಾ ಕಾಲದಲ್ಲಿಯೂ ಸಂಚಾರದಲ್ಲಿಯೇ ಇರಬೇಕಾದ ಪರಿವ್ರಾಜಕರು ಚಾತುರ್ಮಾಸ್ಯದ ಈ ನಾಲ್ಕು ಪಕ್ಷಗಳ ಕಾಲ ಸಂಚರಿಸುವಂತಿಲ್ಲ. ‘ಯತಿಶ್ರೇಷ್ಠರು ಚಾತುರ್ಮಾಸ್ಯ ಮಾಡುವ ಸಮಯವೆಂದರೆ ಅದು ಸಾಮಾನ್ಯವಲ್ಲ. ಆ ಸ್ಥಳದಲ್ಲಿ ದೇವಾನುದೇವತೆಗಳ ಸಾನ್ನಿಧ್ಯವಿರುತ್ತದೆ. ಅದರಿಂದ ಸಮಸ್ತ ಜನರ ಕಲ್ಯಾಣವಾಗುತ್ತದೆ. ಅಲ್ಲಿ ಧಾರ್ಮಿಕ ಪ್ರಭಾವ ಹೆಚ್ಚುತ್ತದೆ’ ಎಂದು ಆಸ್ಥಾನ ವಿದ್ವಾಂಸ ಬಾಲಚಂದ್ರ ಶಾಸ್ತ್ರಿ ತಿಳಿಸಿದರು. ಕೊರೊನಾ ಸೋಂಕು ಇರುವ ಕಾರಣಕ್ಕೆ ಎಲ್ಲ ಶಿಷ್ಯರೂ ಮನೆಯಲ್ಲಿಯೇ ಇದ್ದು, ತಮ್ಮಿಂದಾದ ಸೇವೆ ಸಲ್ಲಿಸಿ, ವ್ರತನಿರತ ಸ್ವಾಮಿಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು. ಅತಿ ಅವಶ್ಯವಿರುವ ಕೆಲವೇ ಕೆಲವು ಮಠದ ಪ್ರಮುಖರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.