ಬುಧವಾರ, ಮಾರ್ಚ್ 3, 2021
22 °C
ರಾಮ ಮಂದಿರ ನಿರ್ಮಾಣ ಸಂಕಲ್ಪದೊಂದಿಗೆ ಸತ್ಯನಾರಾಯಣ ಪೂಜೆ

‘ಹಿಂದೂಗಳಲ್ಲಿ ಸಂಘಟನೆ ಇಂದಿನ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಸಂಕಲ್ಪದೊಂದಿಗೆ ವಿಶ್ವ ಹಿಂದೂ ಪರಿಷತ್ ಸ್ಥಳೀಯ ಘಟಕದ ವತಿಯಿಂದ ಗುರುವಾರ ಇಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಪೂಜೆಯಲ್ಲಿ 108 ದಂಪತಿ ಭಾಗವಹಿಸಿದ್ದರು. ನಂತರ ಪಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಸು.ಕೃಷ್ಣಮೂರ್ತಿ ಅವರು, ‘ಭಾರತದ ಮೇಲೆ ಆಕ್ರಮಣ ನಡೆಯುತ್ತಿರುವ ಗತಕಾಲದಿಂದ ಇಂದಿನವರೆಗೂ ಹಿಂದೂಗಳಲ್ಲಿ ಸಂಘಟನೆಯ ಕೊರತೆಯಿದೆ. ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಸಾಮಾಜಿಕ ಸಾಮರಸ್ಯ ಕಾಪಾಡಲು ದೇವರು ಒಬ್ಬ ನಾಮ ಹಲವು ಎಂಬ ಮಾತನ್ನು ನಡೆಸಬೇಕಾಗಿದ್ದರೂ, ಭಾರತ ಹಿಂದೂ ರಾಷ್ಟ್ರ ಆಗಬೇಕು. ಹಿಂದೂಗಳು ಗೌರವಯುತವಾಗಿ ಜೀವಿಸಬೇಕು. ಜಾತಿ, ಸಮುದಾಯ ಬಿಟ್ಟು, ಹಿಂದೂವಾಗಿ ಬದುಕಬೇಕು’ ಎಂದು ಕರೆ ನೀಡಿದರು.

ಸಂಘಟನೆ ಪ್ರಮುಖ ಗಂಗಾಧರ ಹೆಗಡೆ ಮಾತನಾಡಿ, ‘ದೇಶದಲ್ಲಿ ರಾಮನಿಗೆ ಮಂದಿರ ಕಟ್ಟಲಾಗದಿದ್ದರೆ ಸಂಸ್ಕೃತಿ ಕಟ್ಟಲಾಗದು. ರಾಮ ಮತ್ತು ಭಾರತ ಬೇರೆ ಬೇರೆಯಲ್ಲ. ಹೀಗಾಗಿ ಎಂತಹ ಸಂದರ್ಭ ಬಂದರೂ ರಾಮ ಮಂದಿರ ನಿರ್ಮಾಣ ಮಾಡಬೇಕು. 490 ವರ್ಷಗಳ ಹಿಂದೆ ವಿಕ್ರಮಾದಿತ್ಯ ಮಹಾರಾಜ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದ. ನಂತರ ಅದನ್ನು ಕೆಡವಿ ಬಾಬರಿ ಮಸೀದಿ ಕಟ್ಟಲಾಗಿತ್ತು. ಆದರೆ, ಹಿಂದೂಗಳ ಆರಾಧ್ಯ ಕ್ಷೇತ್ರವಾದ ಅಯೋಧ್ಯೆಯಲ್ಲಿ ಮಂದಿರದ ಹೊರತಾಗಿ ಮಸೀದಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ’ ಎಂದರು. ಪ್ರಮುಖರಾದ ವೆಂಕಟರಮಣ ಹೆಗಡೆ, ಗೋಪಾಲ ದೇವಾಡಿಗ, ಪ್ರಕಾಶ ಸಾಲೇರ, ವಿಠ್ಠಲ ಪೈ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು