ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಸಂಚಾರ: ಚಾಲನಾ ಪರವಾನಗಿ ರದ್ದು

ವಾರ್ತಾ ಇಲಾಖೆಯ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ
Last Updated 26 ಮಾರ್ಚ್ 2020, 9:10 IST
ಅಕ್ಷರ ಗಾತ್ರ

ಕಾರವಾರ:

ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.ಇದನ್ನು ಉಲ್ಲಂಘಿಸಿ ವಾಹನಗಳಲ್ಲಿ ಅನಗತ್ಯವಾಗಿಸಂಚರಿಸಿದರೆ ಚಾಲನಾಪರವಾನಗಿ ಮತ್ತು ನೊಂದಣಿಯನ್ನು ಸ್ಥಳದಲ್ಲೇ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ ಎಚ್ಚರಿಕೆ ನೀಡಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬುಧವಾರ ಹಮ್ಮಿಕೊಂಡಿದ್ದ ‘ವಾರ್ತಾ ಸ್ಪಂದನ – ನೇರ ಫೋನ್‍ ಇನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳಿಗೆ ಅವರು ಉತ್ತರಿಸಿದರು.

ಆರೋಗ್ಯದ ಹಿತದೃಷ್ಟಿಯಿಂದ21 ದಿನ ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ.ಜನರು ಸ್ವಯಂ ಪ್ರೇರಿತರಾಗಿ ತಮ್ಮ ರಕ್ಷಣೆಯೊಂದಿಗೆ ಇನ್ನೊಬ್ಬರ ಆರೋಗ್ಯದ ಹಿತಕ್ಕಾಗಿ ಇದನ್ನು ಪಾಲನೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಆರೋಗ್ಯವಂತ ವ್ಯಕ್ತಿ ಮತ್ತು ಮನೆಯಲ್ಲೇಇರುವವರು ಮುಖಗವಸು ಧರಿಸುವ ಅವಶ್ಯಕತೆ ಇಲ್ಲ. ಶುಚಿತ್ವಕ್ಕೆ ಒತ್ತು ನೀಡಿದರೆ ಸಾಕು. ಅಕ್ಕಪಕ್ಕದ ಮನೆಗಳಿಗೆ ಹೊರಗಡೆಯಿಂದ ಬಂದವರನ್ನು ಅಸ್ಪೃಶ್ಯರಂತೆ ಕಾಣಬಾರದು.14ದಿನಗಳವರೆಗೆ ನಿಗಾದಲ್ಲಿ ಇರುವಂತೆ ತಿಳಿವಳಿಕೆ ನೀಡಬೇಕು. ಜಿಲ್ಲೆಯಲ್ಲಿ ಜೀವನಾವಶ್ಯಕ ಸಾಮಗ್ರಿಗಳ ಸಂಗ್ರಹವಿದ್ದು, ಅಗತ್ಯವಿದ್ದರೆ ಮನೆ ಮನೆಗಳಿಗೆಪೂರೈಸುವ ವ್ಯವಸ್ಥೆಯನ್ನು ಕೂಡಾ ಜಿಲ್ಲಾಡಳಿತ ಮಾಡುತ್ತಿದೆ. ಆದ್ದರಿಂದಜನರು ಯಾವುದೇ ಕಾರಣಕ್ಕೂ ಭಯ ಭೀತರಾಗಬಾರದು’ ಎಂದು ಹೇಳಿದರು.

‘ಜನರು ದುಸ್ಸಾಹಸ ಮಾಡಿಕೊಂಡು ಊರಿಗೆ ಹೋಗುವ ಯೋಚನೆ ಇಟ್ಟುಕೊಳ್ಳದೇ ಮನೆಯಲ್ಲಿಯೇ ಇರಬೇಕು. ಜಿಲ್ಲೆಯ ಜನರು ಪ್ರಜ್ಞಾವಂತರಾಗಿದ್ದು, ಸಂಯಮದಿಂದ ವರ್ತಿಸಿ ಹಾಗೂ ಇತರರಿಗೆ ತಿಳಿವಳಿಕೆ ನೀಡುವ ಕಾರ್ಯವಾಗಲಿ’ ಎಂದು ಆಶಿಸಿದರು.

ಸಿದ್ದಾಪುರ ತಾಲ್ಲೂಕಿನ ಕುರವಂತೆ, ಹೊಸಮಂಜು, ಬಿಳಗಿ ಗ್ರಾಮಗಲ್ಲಿ ಲಾಕ್‍ಡೌನ್ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಮೊಹಮ್ಮದ್ರೋಶನ್, ‘ಗ್ರಾಮೀಣ ಪ್ರದೇಶಗಳಿಗೂ ಲಾಕ್‍ಡೌನ್ ಅನ್ವಯಿಸುತ್ತದೆ. ಎಲ್ಲೆಲ್ಲಿ ಪಾಲನೆಯಾಗುತ್ತಿಲ್ಲ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT