ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡದಲ್ಲಿ ‘ಯೋಗ ದಿನ’ದ ಸರಳ ಆಚರಣೆ

Last Updated 21 ಜೂನ್ 2020, 12:54 IST
ಅಕ್ಷರ ಗಾತ್ರ

ಕಾರವಾರ: ಅಂತರರಾಷ್ಟ್ರೀಯ ಯೋಗ ದಿನವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಲುವಾಗಿ ಲಾಕ್‌ಡೌನ್ ಘೋಷಿಸಿರುವ ಕಾರಣ ಸಾಮೂಹಿಕ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿತ್ತು.

ನಗರದ ಕೆಲವು ಸಂಘಟನೆಗಳು ದೇವಸ್ಥಾನಗಳು, ಸಭಾಂಗಣಗಳಲ್ಲಿ ಯೋಗ ಕಾರ್ಯಕ್ರಮ ಏರ್ಪಡಿಸಿದ್ದವು. ಎಲ್ಲೆಡೆ ಪರಸ್ಪರ ಅಂತರ ಇರುವಂತೆ ಎಚ್ಚರಿಕೆ ವಹಿಸಲಾಗಿತ್ತು. ನಗರದ ಪತಂಜಲಿ ಯೋಗ ಸಮಿತಿಯ ಪ್ರಮುಖರು ಬಾಡ ಮಹಾದೇವ ದೇವಸ್ಥಾನದ ಸಮೀಪ ಸಭಾಂಗಣದಲ್ಲಿ ಯೋಗಾಸನ ಮಾಡಿದರು. ಇದೇರೀತಿ, ಭದ್ರಾ ತಂಡದದ ಸದಸ್ಯರೂ ವಿವಿಧ ಆಸನಗಳನ್ನು ಅಭ್ಯಾಸ ಮಾಡಿದರು.

ನಗರದ ಕಡಲಸಿರಿ ಯುವ ಸಂಘದಿಂದನಂದನಗದ್ದಾ ಹನ್ಮಿವಾಡಾದ ಕುಲಕೋಟೇಶ್ವರ ದೇವಸ್ಥಾನದ ಆವರಣದಲ್ಲಿಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಯೋಗ ಶಿಕ್ಷಕ ಪ್ರಶಾಂತ ರೇವಣಕರ ಅವರು ಯೋಗಾಸನದಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

ನಗರಸಭೆ ಸದಸ್ಯ ನಂದಾ ನಾಯ್ಕ, ನೆಹರೂಯುವ ಕೇಂದ್ರದ ಕಾರ್ಯಕರ್ತೆ ಪೂಜಾ ಜಿ ಕಳಸ, ಕುಲ ಕೋಟೇಶ್ವರ ದೇವಸ್ಥಾನ ಅಧ್ಯಕ್ಷ ದತ್ತಾತ್ರೇಯ ನಾಯ್ಕ‌, ಜ್ಞಾನೇಶ್ವರ ನಾಯ್ಕ, ನಮ್ರತಾ ನಾಯ್ಕ, ನಿವೇದಿತಾ ನಾಯ್ಕ, ವಿನಾಯಕ ನಾಯ್ಕ, ಕಡಲಸಿರಿ ಯುವ ಸಂಘದ ಪ್ರಮುಖರಾದ ಪ್ರಕಾಶ್ ಬೋವಿ, ಗೌರೀಶ್ ಪಾವಸ್ಕರ, ನೋಯಲ್ ಕೊಯ್ಲು, ಕ್ರಿಸ್ ಡಿಸೋಜಾ ಭಾಗವಹಿಸಿದ್ದರು.

ವರ್ಷಾ ರಾಜೇಶ ಕಾರ್ಯಕ್ರಮ ನಿರೂಪಿಸಿದರು. ಕಡಲಸಿರಿ ಯುವ ಸಂಘದ ಉಪಾಧ್ಯಕ್ಷ ಅಭಿಷೇಕ್ ಜಿ. ಕಳಸಸ್ವಾಗತಿಸಿದರು. ವಿನೇಶ ನಾಯ್ಕ ಹಾಗೂ ಪ್ರಸಾದ ಕಳಸ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT