ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ನಟ ರಿಷಬ್ ಶೆಟ್ಟಿ ಕಾರು ತಪಾಸಣೆ!

Published 29 ನವೆಂಬರ್ 2023, 13:13 IST
Last Updated 29 ನವೆಂಬರ್ 2023, 13:13 IST
ಅಕ್ಷರ ಗಾತ್ರ

ಕಾರವಾರ: ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದರು.

ಗೋವಾದಲ್ಲಿ ನಡೆದ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು. ಮಾಜಾಳಿಯಲ್ಲಿರುವ ರಾಜ್ಯ ತನಿಖಾ ಠಾಣೆ ಬಳಿ ಕಾರನ್ನು ಸಿಬ್ಬಂದಿ ತಪಾಸಣೆಗಾಗಿ ತಡೆದು ನಿಲ್ಲಿಸಿದ್ದರು.

‘ನಿಯಮದಂತೆ ಪ್ರತಿ ವಾಹನವನ್ನು ತಡೆದು ತಪಾಸಣೆ ನಡೆಸಲಾಗುತ್ತಿತ್ತು. ಕಾರಿನಲ್ಲಿದ್ದದ್ದು ರಿಷಬ್ ಎಂದು ಗೊತ್ತಾಗುತ್ತಿದ್ದಂತೆ ಪುಳಕಿತರಾದೆವು. ಅವರನ್ನು ಮಾತನಾಡಿಸಿದೆವು. ಕಾರಿನಿಂದ ಕೆಳಕ್ಕೆ ಇಳಿದು ಬಂದ ಅವರು ಕರ್ತವ್ಯದಲ್ಲಿದ್ದ ಅಬಕಾರಿ, ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜತೆ ಫೋಟೊ ತೆಗೆಸಿಕೊಂಡರು’ ಎಂದು ಸಿಬ್ಬಂದಿಯೊಬ್ಬರು ಸಂತಸದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT