ಇಳಿಜಾರು ಮಾರ್ಪಡಿಸಲು ಸಲಹೆ
ಮೇ ತಿಂಗಳಿನಲ್ಲಿ ಅಳ್ಳಂಕಿ ವಸತಿ ಶಾಲೆ ಕಟ್ಟಡವಿರುವ ಗುಡ್ಡ, ಕುಮಟಾದ ಬರ್ಗಿ ಬಳಿಕ ಕುರಿಗದ್ದೆ, ತೊರ್ಕೆ, ಯಲ್ಲಾಪುರದ ಕೊಡ್ಲಗದ್ದೆ ಭೂಕುಸಿತ ಸ್ಥಳಗಳಲ್ಲಿ ಜಿಎಸ್‌ಐನ ಹಿರಿಯ ಭೂವಿಜ್ಞಾನಿಗಳಾದ ರಾಹುಲ್ ವಡಕೇದತ್ ಮತ್ತು ಅಚನ್ ಕೊನ್ಯಾಕ್ ಪರಿಶೀಲನೆ ಕೈಗೊಂಡಿದ್ದರು. ‘ಅಳ್ಳಂಕಿಯಲ್ಲಿ ಕಟ್ಟಡ ನಿರ್ಮಿಸಿದ ಗುಡ್ಡದ ಸುತ್ತಲೂ ಉಂಟದ ಕೊರಕಲು ಮಾರ್ಪಾಟುಗೊಳಿಸಬೇಕು. ಅಲ್ಲಿ ಪುನಃ ಕೊರಕಲು ಉಂಟಾಗದಂತೆ ರಕ್ಷಣಾ ಕ್ರಮವಾಗಬೇಕು. ಅಲ್ಲಿರುವ ಸಸಿಗಳನ್ನು ಕಿತ್ತುಹಾಕುವ ಕೆಲಸ ನಡೆಯಬಾರದು. ಮಣ್ಣು ಗಟ್ಟಿಯಾಗಿ ಹಿಡಿದಿಡಬಲ್ಲ ಹುಲ್ಲುಗಳನ್ನು ಬೆಳೆಸಬೇಕು. ಕಣಿವೆಗೆ ನಿರ್ಮಿಸಲಾದ ಕಾಂಕ್ರೀಟ್ ತಡೆಗೋಡೆಯಿಂದ 30 ಮೀಟರ್ ವ್ಯಾಪ್ತಿಯಲ್ಲಿ ಇಳಿಜಾರು ಕತ್ತರಿಸಬಾರದು’ ಎಂದು ಅವರು ಸಲಹೆ ನೀಡಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು.