ಅಂಕೋಲಾ: ‘ಪದ್ಮಶ್ರೀ ಪುರಸ್ಕೃತರಾದ ದಿ.ಸುಕ್ರಿ ಗೌಡ ಮತ್ತು ದಿ.ತುಳಸಿ ಗೌಡ ಅವರ ಸ್ಮರಣಾರ್ಥ ಅಂಕೋಲಾ ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ನ.5 ರಿಂದ ನ.11ರವರೆಗೆ ಪಟ್ಟಣದ ಜೈಹಿಂದ ಮೈದಾನದಲ್ಲಿ ಅಂಕೋಲಾ ಕರಾವಳಿ ಉತ್ಸವ ನಡೆಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗದೀಶ ನಾಯಕ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಕೋಲಾ ಸಾಂಸ್ಕೃತಿಕ ಸ್ಥಳವಾಗಿದ್ದು ತಾಲ್ಲೂಕಿನ ಪ್ರತಿಭೆಗಳಿಗೆ ಅವಕಾಶ ನೀಡಲು ಕಾರ್ಯಕ್ರಮ ಆಯೋಜಿಸಲಾಗಿದೆ‘ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಂಜಯ ನಾಯ್ಕ ಮಾತನಾಡಿ, ‘ಜಿಲ್ಲೆಯ ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ನಿಡುವುದು ಹಾಗೂ ಶೇ 60ರಷ್ಟು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದು ಅಂಕೋಲಾ ಕರಾವಳಿ ಉತ್ಸವ ಸಮಿತಿಯ ತೀರ್ಮಾನವಾಗಿದೆ’ ಎಂದರು.

ಸಂಘಟಕರಾದ ಶ್ರೀಧರ ನಾಯ್ಕ, ವಿಶ್ವನಾಥ ನಾಯ್ಕ, ನೀಲೇಶ ನಾಯ್ಕ, ರಜತ್ ನಾಯ್ಕ, ರಘುವೀರ ನಾಯ್ಕ, ಮಂಜುನಾಥ ಟಾಕೇಕರ, ಸುಭಾಸ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.