ಭಟ್ಕಳ: ಪಟ್ಟಣದ ಮಾರುತಿನಗರ ಹೆದ್ದಾರಿಯಲ್ಲಿ ಯುಜಿಡಿ ಚೇಂಬರ್ ನೀರು ಸೋರಿಕೆಯಾಗಿ ಸುತ್ತಮುತ್ತಲಿನ ಬಾವಿಯ ನೀರು ಕಲುಷಿತಗೊಂಡಿದ್ದು, ಪುರಸಭೆಯಿಂದ ಉಚಿತ ನಲ್ಲಿ ನೀರು ಸಂಪರ್ಕ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಟ್ಟಣದ ರಾಘವೇಂದ್ರ ಮಠದ ಬಳಿ ಯುಜಿಡಿ ಚೇಂಬರ್ ಬ್ಲಾಕ್ ಆದ ಕಾರಣ ಮಲಿನ ನೀರು ಸುತ್ತಮುತ್ತಲಿನ 10 ಕ್ಕೂ ಅಧಿಕ ಬಾವಿ ಸೇರಿ ಬಾವಿ ನೀರು ಕಲುಷಿಗೊಂಡಿದೆ. ಚೇಂಬರ್ ಸೋರಿಕೆಯ ಬಗ್ಗೆ ಪುರಸಭೆಗೆ ದೂರು ನೀಡಿದರೆ ಇದು ತಮಗೆ ಸಂಬಂಧಿಸಿದ್ದಲ್ಲ. ಐ ಆರ್ ಬಿಯವರ ಬಳಿ ಕೇಳಿ ಎನ್ನುತ್ತಾರೆ. ಐ.ಆರ್. ಬಿಯವರನ್ನು ಕೇಳಿದರೆ ನಮ್ಮ ಹೊಸ ಲೈನಿಗೆ ಪುರಸಭೆಯವರು ಸಂಪರ್ಕ ನೀಡಿರುವ ಕಾರಣ ಬ್ಲಾಕ್ ಆಗಿದೆ ಎಂದು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಮಾರುತಿ ನಗರದ ಹೆದ್ದಾರಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಇದೆ. ಪ್ರತಿ ದಿವಸ ಇದೇ ಬಾವಿಯ ನೀರನ್ನು ತೆಗೆದು ದೇವಿರಿಗೆ ಅಭಿಷೇಕ ಮಾಡಬೇಕು. ಒಂದೊಮ್ಮೆ ಆ ಬಾವಿಯ ನೀರು ಕಲುಷಿತಗೊಂಡರೆ ದೇವರ ಅಭಿಷೇಕದ ನೀರಿಗಾಗಿಯೂ ಪರಿತಪಿಸಬೇಕಾದ ಪರಸ್ಥಿತಿ ಎದುರಾಗಬಹುದು. ಬೇಸಿಗೆ ಸಮಯ ಹತ್ತಿರ ಬರುತ್ತಿರುವ ಸಮಯದಲ್ಲಿ ಪುರಸಭೆಯ ನಿರ್ಲಕ್ಯದಿಂದಾಗಿ ಬಾವಿ ನೀರು ಕಲುಷಿತಗೊಂಡಿದೆ. ದೂರು ನೀಡಿದರೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಾವಿ ನೀರು ಕಲುಷಿತಗೊಂಡ ಮನೆಗಳಿಗೆ ಉಚಿತ ನಲ್ಲಿ ನೀರು ನೀಡಿ ಎಂದರೆ ಅದಕ್ಕೂ ಪುರಸಭೆಯವರು ಒಪ್ಪುತ್ತಿಲ್ಲ ಎನ್ನತ್ತಾರೆ ಸ್ಥಳೀಯರಾದ ಅಚ್ಯುತ್ ಕಾಮತ್ ಅವರು. ಪುರಸಭೆಯಿಂದ ಇದನ್ನು ಶಾಶ್ವತವಾಗಿ ಸರಿಪಡಿಸದಿದ್ದಲ್ಲಿ ಸ್ಥಳೀಯರು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.