ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ: ಶಂಕಿತ ಉಗ್ರನಿಗೆ ನೋಟಿಸ್‌

Published 21 ಜೂನ್ 2024, 16:17 IST
Last Updated 21 ಜೂನ್ 2024, 16:17 IST
ಅಕ್ಷರ ಗಾತ್ರ

ಭಟ್ಕಳ: ಪುಣೆಯಲ್ಲಿ ನಡೆಸಿದ ಭಯೋತ್ಪಾದನೆ ಚಟುವಟಿಕೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರು ಆಗುವಂತೆ ಭಟ್ಕಳದ ಅಬ್ದುಲ್ ಕಾದಿರ್ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ ಎಂಬಾತನಿಗೆ ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್) ನೋಟಿಸ್ ಜಾರಿ ಮಾಡಿದೆ.

‘2008ರಲ್ಲಿ ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಕಾದಿರ್‌ಗಾಗಿ ಹುಡುಕಾಟ ನಡೆದಿದೆ. ಅದಕ್ಕಾಗಿ ಸುಲ್ತಾನ ವಾಸವಿರುವ ಮನೆ, ಭಟ್ಕಳ ತಹಶೀಲ್ದಾರ್‌ ಕಚೇರಿ ಹಾಗೂ ಪುರಸಭೆಯ ನೋಟಿಸ್‌ ಫಲಕಕ್ಕೆ ಎಟಿಎಸ್‌ ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT