ದಾಂಡೇಲಿ: ತಾಲ್ಲೂಕಿನ ಬಿರಂಪಾಲಿ ಗ್ರಾಮದ ಅಕೋಡದ ಹತ್ತಿರ ಕಾಳಿ ನದಿಯಲ್ಲಿ ಶನಿವಾರ ಸ್ನಾನಕ್ಕೆ ಇಳಿದಿದ್ದ ಯುವಕ ನಾಪತ್ತೆಯಾಗಿದ್ದು, ಭಾನುವಾರ ಶವವಾಗಿ ಪತ್ತೆಯಾಗಿದ್ದಾನೆ.

ಗಾಂಧಿನಗರ ನಿವಾಸಿ ನಿರೂಪಮ ನಾಮದೇವ ಕಾಂಬಳೆ (18) ಮೃತ ಯುವಕ. ಶನಿವಾರ ಬೆಳಿಗ್ಗೆ ಸ್ನೇಹಿತರ ಜೊತೆ ಅಕೋಡದ ಕಾಳಿ ನದಿಗೆ ಸ್ನಾನಕ್ಕೆ ಹೋಗಿದ್ದ ಯುವಕ ನದಿಯಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ದಾಂಡೇಲಿ ನಗರ ಗ್ರಾಮೀಣ ಠಾಣೆ ಪೊಲೀಸರು, ಅರಣ್ಯ ಅಧಿಕಾರಿಗಳು, ಹಳಿಯಾಳ ಅಗ್ನಿ ಶಾಮಕ ತಂಡ ಹಾಗೂ ರಾಫ್ಟಿಂಗ್ ತಂಡದ ಫ್ಲೈಕ್ಯಾಚರ್ ತಂಡದೊಂದಿಗೆ ಯುವಕನ ಶೋಧ ಕಾರ್ಯ ಶನಿವಾರ ತಡ ರಾತ್ರಿವರೆಗೆ ನಡೆಸಲಾಯಿತು. ಭಾನುವಾರ ಮುಂದುವರಿದ ಶೋಧ ಕಾರ್ಯದಲ್ಲಿ ಯುವಕ ನದಿಯಲ್ಲಿ ಸುಮಾರು 500 ಮೀ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಶಿವಾನಂದ ನವಲಗಿ, ವೆಂಕಟೇಶ್ ತಗ್ಗಿನ ಹಾಗೂ ಜೊಯಿಡಾ ಅಗ್ನಿಶಾಮಕದಳ ಸಿಬ್ಬಂದಿ, ಅರಣ್ಯ ಅಧಿಕಾರಿಗಳು, ಫ್ಲೈಕ್ಯಾಚರ್ ರಾಫ್ಟಿಂಗ್ನ ಚಾಂದ್ ಕುಟ್ಟಿ ಮತ್ತು ತಂಡ ಹಾಗೂ ಮಹಾನ್ ಅಡ್ವೆಂಚರ್ ಅಲಿ ಮತ್ತು ತಂಡ ಶೋಧ ಕಾರ್ಯಾಚರಣೆಯಲ್ಲಿದ್ದರು.

ಈ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಶವ ಪರೀಕ್ಷೆಯನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.