ಯಲ್ಲಾಪುರ: ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯ ಬೇಡ್ತಿ ತಿರುವಿನಲ್ಲಿ ಗುರುವಾರ ಕಾಲೇಜು ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಬಸ್ಸು ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 8 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಶಿವಮೊಗ್ಗದ ಭೂಮಿಕಾ, ಶಿಕಾರಿಪುರ, ಹೊಸನಗರ ಹಾಗೂ ಸೊರಬದ ಸುತ್ತಮುತ್ತಲ ಭಾಗದ ಸುರಭಿ, ಸಿಂಚನಾ, ಅನಂತ, ಆಂಜನೇಯ, ಚಂದನ, ಚಂದ್ರಶೇಖರ, ಪ್ರಶಾಂತ ಗಾಯಗೊಂಡ ವಿದ್ಯಾರ್ಥಿಗಳು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದರು. ಜೂನ್ 12ರ ನಸುಕಿನ 4 ಗಂಟೆಗೆ ಅವರು ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಯಲ್ಲಾಪುರದ ಬೇಡ್ತಿ ತಿರುವಿನಲ್ಲಿ ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಯಿತು.

ಈ ವೇಳೆ ಕಾಲೇಜು ಮಕ್ಕಳು ನಿದ್ರೆಯ ಮಂಪರಿನಲ್ಲಿದ್ದರು. ಬಸ್ಸಿನಲ್ಲಿ 39 ಪ್ರಯಾಣಿಕರಿದ್ದರು. ವಿದ್ಯಾರ್ಥಿಗಳು ದಾಂಡೇಲಿ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದರು. ಬಸ್ ಅಪಘಾತದ ಪರಿಣಾಮ ತಮ್ಮ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಬಸ್ಸನ್ನು ಕ್ರೇನ್ ಬಳಸಿ ಮೇಲೆತ್ತಲಾಗಿದೆ. ಗಾಯಗೊಂಡವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಚಿಕ್ಕಮಗಳೂರಿನ ಮಧುಸೂದನ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ಪವನ್ ಪೊಲೀಸ್ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.