ಕಾರವಾರ: ತಾಲ್ಲೂಕಿನ ಹಣಕೋಣ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು ನಾಯ್ಕ (58) ಎಂಬುವವರನ್ನು ದುಷ್ಕರ್ಮಿಗಳ ಗುಂಪೊಂದು ತಲ್ವಾರ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು, ರಫ್ತು ವಹಿವಾಟು ನಡೆಸುತ್ತಿರುವ ಉದ್ಯಮಿ ತನ್ನ ಊರಾದ ಹಣಕೋಣಕ್ಕೆ ವಾರದ ಹಿಂದೆ ಬಂದಿದ್ದರು. ಭಾನುವಾರ ಪುಣೆಗೆ ಹೊರಡಲು ಸಿದ್ದರಾಗಿದ್ದರು. ನಸುಕಿನ ಜಾವ 5.30ರ ಸುಮಾರಿಗೆ ಅವರ ಹತ್ಯೆ ಮಾಡಲಾಗಿದೆ.

'ನಾಲ್ಕರಿಂದ ಐದು ಜನರಿದ್ದ ಗುಂಪೊಂದು ಮನೆಗೆ ನುಗ್ಗಿ ಕೃತ್ಯ ನಡೆಸಿದೆ. ವಿನಾಯಕ ಅವರ ಪತ್ನಿ ವೃಶಾಲಿ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇವರಿಬ್ಬರೇ ಮನೆಯಲ್ಲಿದ್ದರು' ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.