ಯಲ್ಲಾಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಜೀಪ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪದಡಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಕಳದ ತಿರುಮಲ ನಾಯಕ, ಬೆಳಗಾವಿಯ ರಮೇಶ ನಾಗಪ್ಪ ನೇಗನಾಳ, ಶಿವರಾಯಪ್ಪ ಶಿವುಗುಂಡಪ್ಪ ಪಾಟೀಲ್, ಗೋಕಾಕದ ಗಂಗಪ್ಪ ನಿಂಗಪ್ಪ ಟೋನಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಾನುವಾರು ಸಾಗಿಸುತ್ತಿದ್ದ ವಾಹನ ಹಾಗೂ ₹80 ಸಾವಿರ ಮೌಲ್ಯದ ಐದು ಕರು ಮತ್ತು ಒಂದು ಆಕಳನ್ನು ವಶಕ್ಕೆ ಪಡೆಯಲಾಗಿದೆ.
‘ಯಾವುದೇ ಪರವಾನಗಿ ಇಲ್ಲದೆ, ಹಿಂಸಾತ್ಮಕವಾಗಿ ಬೆಳಗಾವಿಯಿಂದ ಭಟ್ಕಳಕ್ಕೆ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.