ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆ: ಕ್ರೈಸ್ತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ- ಭೀಮಣ್ಣ ನಾಯ್ಕ

Last Updated 8 ಮೇ 2022, 12:12 IST
ಅಕ್ಷರ ಗಾತ್ರ

ಶಿರಸಿ: ಜೂನ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕ್ರೈಸ್ತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಕ್ರಿಶ್ಚಿಯನ್ ಅಸೊಸಿಯೇಶನ್ ಜಿಲ್ಲಾ ಘಟಕ ಹಾಗೂ ಕಾರವಾರ ಧರ್ಮಪ್ರಾಂತದ ಕ್ಯಾಥೋಲಿಕ್ ಅಸೊಸಿಯೇಶನ್ ವತಿಯಿಂದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.

‘ಕ್ರೈಸ್ತ ಧರ್ಮದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಈಚೆಗೆ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಮೇಲೆ ಸುಳ್ಳು ಆರೋಪಗಳು, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ, ಕ್ರೈಸ್ತ ವಿರೋಧಿ ಕಾನೂನುಗಳ ಜಾರಿಗೆಯ ಪ್ರಯತ್ನ ಧರ್ಮಗುರುಗಳ ಮೇಲೆ ಕೇಸುಗಳು ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಿಧಾನ ಪರಿಷತ್‍ನಲ್ಲಿ ಸಮುದಾಯ ಪ್ರತಿನಿಧಿಸುವ ಯಾವುದೇ ಸದಸ್ಯರಿಲ್ಲ. ಈ ಹಿಂದೆ ಮಾರ್ಗರೇಟ್ ಆಳ್ವಾ, ಆಸ್ಕರ್ ಫರ್ನಾಂಡಿಸ್ ರಾಜ್ಯಸಭೆ ಪ್ರತಿನಿಧಿಸಿದ್ದರು. ಈಗ ಮುಂದಿನ ಚುನಾವಣೆಯಲ್ಲೂ ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗೆ ಸ್ಪರ್ಧೆಗೆ ಅವಕಾಶ ನೀಡಬೇಕು. ಆಸ್ಕರ್ ಪ್ರತಿನಿಧಿಸುತ್ತಿದ್ದ ರಾಜ್ಯಸಭಾ ಸ್ಥಾನದಲ್ಲಿ ಕ್ರಿಶ್ಚಿಯನ್ ಅಭ್ಯರ್ಥಿಯೊಬ್ಬರನ್ನು ಮುಂದುವರೆಸಬೇಕು’ ಎಂದು ಒತ್ತಾಯಿಸಿದರು.

ಪ್ರಮುಖರಾದ ಸ್ಯಾಮ್ಸನ್ ಡಿಸೋಜಾ, ಜುಲಿಯಾನಾ ಫರ್ನಾಂಡಿಸ್, ಮೇರಿ ಗರಿಬಾಟೆ, ಮಾಲಾ ಬೃಗಾಂಜಾ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT