ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಜ.23ರಿಂದ ಸಂಸದರ ಮನೆ ಎದುರು ಪ್ರತಿಭಟನೆ- ಸಿಐಟಿಯು

Published 8 ಜನವರಿ 2024, 14:52 IST
Last Updated 8 ಜನವರಿ 2024, 14:52 IST
ಅಕ್ಷರ ಗಾತ್ರ

ಕಾರವಾರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಜ.23ರಿಂದ 25ರ ವರೆಗೆ ಸಂಸದ ಅನಂತಕುಮಾರ ಹೆಗಡೆ ನಿವಾಸದ ಎದುರು ಪ್ರತಿಭಟನೆ ನಡೆಸಲು ಸಿಐಟಿಯು ಜಿಲ್ಲಾ ಸಮಿತಿ ನಿರ್ಧರಿಸಿದೆ.

ಅಂಕೋಲಾದಲ್ಲಿ ಸೋಮವಾರ ಸಭೆ ನಡೆಸಿದ ಜಿಲ್ಲಾ ಸಮಿತಿಯ ಪ್ರಮುಖರು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಗಳ ವಿರುದ್ಧ ವಿವಿಧ ಬಗೆಯ ಹೋರಾಟ ನಡೆಸಲು ತೀರ್ಮಾನ ಕೈಗೊಂಡರು.

ಯೋಜನಾ ಕಾರ್ಮಿಕರು, ಸಂಘಟಿತ, ಅಸಂಘಟಿತ ಹಾಗೂ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರ ಬೇಡಿಕೆಗ ಮೇಲೆ ಜ.12ರಿಂದ ಸಹಿ ಸಂಗ್ರಹ ಚಳವಳಿ ನಡೆಸಬೇಕು. ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಸಹಿ ಸಂಗ್ರಹ ಉದ್ಘಾಟನೆಯಾಗಿ ಒಂದು ತಿಂಗಳೂಗಳ ಕಾಲ ನಡೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯದ ಎಲ್ಲ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಲು ಸಿಐಟಿಯು ನೀಡಿರುವ ಕರೆಗೆ ಸ್ಪಂದಿಸಿ ಜಿಲ್ಲೆಯಲ್ಲಿಯೂ ಸಂಸದರ ಮನೆ ಎದುರು ಧರಣಿ ನಡೆಸಬೇಕು ಎಂಬ ನಿರ್ಣಯವನ್ನು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ ಮಂಡಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ತಿಲಕ ಗೌಡ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶಾಂತಾರಾಮ ನಾಯಕ, ಸಲಿಂ ಸೈಯದ್, ಜಗದೀಶ್ ನಾಯ್ಕ, ಜಯಶ್ರೀ ಹಿರೇಕರ, ಗೀತಾ ನಾಯ್ಕ ಭಟ್ಕಳ, ಎಚ್.ಬಿ.ನಾಯಕ, ಲಲಿತಾ ಹೆಗಡೆ, ಮಾಯಾ ಕಾಣೇಕರ, ಹನುಮಂತ ಸಿಂದೋಗಿ, ಮಂಜುನಾಥ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT