ಗೋಕರ್ಣ: ಸ್ವಚ್ಛ ಪರಿಸರ ಉತ್ತಮ ಶಿಕ್ಷಣ ಕಲಿಕೆಗೆ ಸಹಕಾರಿಯಾಗಿದೆ. ಭದ್ರಕಾಳಿ ಪ್ರೌಢಶಾಲೆಯ ಆವರಣ ಶುದ್ಧವಾಗಿದೆ. ಇಂತಹ ವಾತಾವರಣದಲ್ಲಿ ಪರಿಸರ ಸ್ನೇಹಿ ಸೋಲಾರ ಘಟಕ ನಿರ್ಮಿಸಿರುವುದು ಶ್ಲಾಘನೀಯ ಎಂದು ಉತ್ತರಪ್ರದೇಶ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣ ಅಭಿಪ್ರಾಯಪಟ್ಟರು.

ಅವರು ಶನಿವಾರ ಇಲ್ಲಿಯ ಭದ್ರಕಾಳಿ ಪ್ರೌಢಶಾಲೆಯಲ್ಲಿ ಛಾಮಿ ವಿದ್ಯಾ ವಾಹಿನಿ ಟ್ರಸ್ಟ್ ವತಿಯಿಂದ ನಿರ್ಮಿಸಿದ ಸೋಲಾರ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ಈ ಕ್ಷೇತ್ರ ಮೊದಲಿನಿಂದಲೂ ಖ್ಯಾತಿ ಪಡೆದಿದೆ. ಈ ಕ್ಷೇತ್ರದ ಬಗ್ಗೆ ಕ್ರಿಸ್ತಪೂರ್ವ 6 ನೇ ಶತಮಾನದಲ್ಲಿಯೇ ಉಲ್ಲೇಖವಿದೆ. ಇಲ್ಲಿಯ ಮಹತ್ವವನ್ನು ಮುಂದಿನ ಪೀಳಿಗೆಗೂ ತಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ನಾನು ಈಗಾಗಲೇ ಕಾರ್ಯಗತನಾಗಿದ್ದೇನೆ. ಗೋಕರ್ಣ ಎಕ್ರೋಸ್ ಭಾರತ ಎಂಬ ಪುಸ್ತಕವನ್ನು ರಚಿಸಿ ಬಿಡುಗಡೆ ಮಾಡಿದ್ದೇನೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ಶಿಕ್ಷಣ ಪ್ರಸಾರ ಮಂಡಳಿಯ ಅಧ್ಯಕ್ಷ ವಿನಾಯಕ ಮಲ್ಲನ್ ಮಾತನಾಡಿ, ಶಾಲೆಯ ಅಭಿವೃದ್ಧಿಯ ಬಗ್ಗೆ ಛಾಮಿ ವಿದ್ಯಾ ವಾಹಿನಿ ಟ್ರಸ್ಟ್ ಶ್ರಮಿಸುತ್ತಿದೆ. ಎಲ್ಲರೂ ಇಲ್ಲಿಯ ಹಳೆಯ ವಿದ್ಯಾರ್ಥಗಳೇ. ತಾವು ಕಲಿತ ಶಾಲೆ ಹೆಚ್ಚಿನ ಅಭಿವೃದ್ಧಿ ಹೊಂದಬೇಕು ಎಂಬ ಅವರ ಕಳಕಳಿ ಮೆಚ್ಚುವಂತದ್ದು ಎಂದರು. ಅದೇ ಸಂದರ್ಭದಲ್ಲಿ ಛಾಮಿ ವಿದ್ಯಾ ವಾಹಿನಿ ಟ್ರಸ್ಟಿನ ಅಧಿಕೃತ ವೆಬ್ ಸೈಟ್ ಅನ್ನೂ ಉದ್ಘಾಟಿಸಲಾಯಿತು.

ಛಾಮಿ ಟ್ರಸ್ಟಿನ ಅಧ್ಯಕ್ಷೆ ಜ್ಯೋತಿ ಮಿರ್ಜಾನಕರ್ ಟ್ರಸ್ಟಿನ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿನ ಉಪಾಧ್ಯಕ್ಷ ಪ್ರಕಾಶ ಕಾಮತ್, ಕೆನರಾ ಶಿಕ್ಷಣ ಪ್ರಸಾರ ಮಂಡಳಿಯ ಕಾರ್ಯದರ್ಶಿ ಗಣಪತಿ ನಾಯಕ, ವಸಂತರಾಜನ್ ಕೊಡ್ಲೆಕೆರೆ, ಶೀಲಾ ನಿತಿನ್ ಗೋಕರ್ಣ, ಭದ್ರಕಾಳಿ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ನಾಯಕ, ಉಪನ್ಯಾಸಕ ಎನ್.ಎಸ್.ಲಮಾಣಿ, ಟ್ರಸ್ಟಿನ ಸದಸ್ಯ ಪ್ರಕಶ ನಾಡ್ಕರ್ಣಿ, ರವಿ ಗುನಗ, ಭದ್ರಕಾಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಜಿ.ನಾಯಕ ದೊರೆ ಇದ್ದರು. ಕಾಲೇಜಿನ ಉಪನ್ಯಾಸಕ ರಾಮಮೂರ್ತಿ ನಾಯಕ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.