ಕಾರವಾರ: ನೂರಾರು ಜನರ ಕೋಟ್ಯಂತರ ಮೊತ್ತದ ಠೇವಣಿ ಇರಿಸಲಾಗಿದ್ದ ಇಲ್ಲಿನ ದಿ ಕಾರವಾರ ಅರ್ಬನ್ ಸಹಕಾರ ಬ್ಯಾಂಕ್ನ ಪರವಾನಗಿ ರದ್ದುಪಡಿಸಿ ಈಚೆಗೆ ಆರ್ಬಿಐ ಆದೇಶಿಸಿದ ಬೆನ್ನಲ್ಲೇ ಬ್ಯಾಂಕ್ನ ಆವರಣದಲ್ಲಿ ಹಣ ಹಿಂದಿರುಗಿಸಲು ಒತ್ತಾಯಿಸಿ ಠೇವಣಿದಾರರು ಗುಂಪುಗುಂಪಾಗಿ ನಿಂತು ಒತ್ತಾಯಿಸುತ್ತಿದ್ದರು. ಶ್ರಮದ ಸಂಪಾದನೆ ಕಳೆದುಕೊಂಡ ದುಗುಡ ಅಲ್ಲಿದ್ದ ಜನರಲ್ಲಿತ್ತು.

ಇಂಥ ದುಗುಡ ಕೇವಲ ಇದೊಂದೇ ಬ್ಯಾಂಕ್ನ ಗ್ರಾಹಕರಿಗಲ್ಲ, ಜಿಲ್ಲೆಯ ಹತ್ತಾರು ಸಹಕಾರ ಬ್ಯಾಂಕ್ಗಳ ಠೇವಣಿದಾರರ ಮುಖದಲ್ಲಿ ಈಗ ಮಂದಹಾಸ ಮರೆಯಾಗಿ, ಆತಂಕದ ಛಾಯೆ ಮೂಡಿದೆ. ಇದೇ ತಾಲ್ಲೂಕಿನ ಸದಾಶಿವಡಗದ ಜೈ ಅಂಬೆ ದುರ್ಗಾಮಾತಾ ಸೌಹಾರ್ದ ಬ್ಯಾಂಕ್ ಕೂಡ ₹56 ಕೋಟಿಯಷ್ಟು ಮೊತ್ತ ವಂಚಿಸಿದೆ ಎಂದು ಗ್ರಾಹಕರು ಈಚೆಗೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ಬ್ಯಾಂಕ್ ವಿರುದ್ಧ ₹40 ಕೋಟಿ ಮೊತ್ತ ಅವ್ಯವಹಾರ ಮಾಡಿರುವ ಪ್ರಕರಣ ದಾಖಲಾಗಿದೆ.

ಸಹಕಾರ ಕ್ಷೇತ್ರ ಭದ್ರವಾಗಿರುವ ಜಿಲ್ಲೆಯಲ್ಲಿ ಸಾಲು ಸಾಲು ಸಹಕಾರ ಬ್ಯಾಂಕ್ಗಳು ಈಚಿನ ವರ್ಷದಲ್ಲಿ ನಷ್ಟದ ಹಾದಿಯಲ್ಲಿ ಸಾಗುತ್ತಿರುವುದಾಗಿ ಸಹಕಾರ ಸಂಘಗಳ ಇಲಾಖೆ ಈಚೆಗೆ ಬಹಿರಂಗಪಡಿಸಿದೆ.

‘ಜಿಲ್ಲೆಯಲ್ಲಿನ 984 ಸಹಕಾರ ಸಂಸ್ಥೆಗಳ ಪೈಕಿ 252 ಸಂಸ್ಥೆಗಳು ಆರ್ಥಿಕ ನಷ್ಟದಲ್ಲಿವೆ. 732 ಸಂಸ್ಥೆಗಳು ಲಾಭದಲ್ಲಿ ನಡೆಯುತ್ತಿವೆ. ನಷ್ಟದಲ್ಲಿರುವ ಸಂಸ್ಥೆಗಳ ಪೈಕಿ ಕೆಲವು ಮುಚ್ಚುವ ಹಂತದಲ್ಲಿವೆ’ ಎಂದು ಸಹಕಾರ ಸಂಘಗಳ ಇಲಾಖೆ ತಿಳಿಸಿದೆ.

‘8 ಸಹಕಾರ ಸಂಘಗಳಲ್ಲಿ ₹200 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವ ಆರೋಪವಿದೆ. ಗ್ರಾಹಕರ ದೂರು ಆಧರಿಸಿ ಅವುಗಳ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಸಹಕಾರ ಕಾಯ್ದೆ 64ರ ಅಡಿಯಲ್ಲಿ ತನಿಖೆ ಪ್ರಗತಿಯಲ್ಲಿದೆ’ ಎಂದು ಸಹಕಾರ ಸಂಘಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಹಕಾರ ಸಂಘಗಳಲ್ಲಿ ಅವ್ಯವಹಾರ ನಿಯಮಬಾಹೀರ ಚಟುವಟಿಕೆಗಳು ನಡೆದರೆ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಇಲಾಖೆಗೆ ಅಧಿಕಾರವಿದೆ
ಮಂಜುನಾಥ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕ

ಕೃಷಿಯೇತರ ಸಂಘಗಳು ಹೆಚ್ಚು:

‘ಕೃಷಿ ತೋಟಗಾರಿಕೆ ಸಂಬಂಧಿತ ಆರ್ಥಿಕ ವಹಿವಾಟು ನಡೆಸುತ್ತಿರುವ ಸಹಕಾರ ಸಂಸ್ಥೆಗಳು ಸುಭದ್ರವಾಗಿರುವುದು ಹೆಚ್ಚು. ಆದರೂ ಜಿಲ್ಲೆಯ 176 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 18 ನಷ್ಟದಲ್ಲಿವೆ. ಶಿರಸಿ ಮುಂಡಗೋಡದಲ್ಲಿ ತಲಾ 4 ಸಂಸ್ಥೆಗಳು ನಷ್ಟದ ಹಾದಿಯಲ್ಲಿವೆ. 124 ಕೃಷಿಯೇತರ ಕ್ರೆಡಿಟ್ ಸೊಸೈಟಿಗಳ ಪೈಕಿ 28 ನಷ್ಟದಲ್ಲಿವೆ ಎಂಬುದಾಗಿ ಲೆಕ್ಕ ಪರಿಶೋಧನಾ ವರದಿಯಲ್ಲಿ ದೃಢಪಟ್ಟಿದೆ’ ಎಂಬುದಾಗಿ ಸಹಕಾರ ಸಂಘಗಳ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.