ಯಲ್ಲಾಪುರ: ಶ್ರೀಗಂಧದ ಮರ ಕಡಿದು, ದಾಸ್ತಾನು ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಮೂವರನ್ನು ಬಂಧಿಸಿ, ಆರೋಪಿಗಳಿಂದ ₹7.5 ಲಕ್ಷ ಮೌಲ್ಯದ 125.495 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಮಲಾಕರ ಶಂಕರ ಸಿದ್ದಿ ಬೆದೆಹಕ್ಲ, ಗಣೇಶ ಪುತ್ತು ಸಿದ್ದಿ ಗೋರ್ಸಗದ್ದೆ, ರವಿಚಂದ್ರ ಸೀತಾರಾಮ ಶೆಟ್ಟಿ ನರಕನಸರ ಆರೋಪಿಗಳು.

ಆರೋಪಿಗಳು ತಾಲ್ಲೂಕಿನ ಮಂಚೀಕೇರಿ ವಲಯದ ಕಂಪ್ಲಿ ಗ್ರಾಮದ ತೋಟಗದ್ದೆ- ಹಾಸಣಗಿ ಬೆಟ್ಟದಲ್ಲಿ ಶ್ರೀಗಂಧದ ಮರಗಳನ್ನು ಕಡಿದು, ಶ್ರೀಗಂಧದ ತುಂಡು ಹಾಗೂ ಚಕ್ಕೆಗಳನ್ನು ತಯಾರು ಮಾಡಿ ದಾಸ್ತಾನು ಮಾಡಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.