ಸ್ವಾತಂತ್ರ್ಯದ ನೆನಪಿನ ಕಟ್ಟೆ
‘ಸ್ವಾತಂತ್ರ್ಯದ ಸವಿನೆನಪಿಗಾಗಿ ಬನ್ನಿಕಟ್ಟೆ ನಿರ್ಮಿಸಿದ್ದರ ಉಲ್ಲೇಖ ಇಲ್ಲಿದೆ. ಕಟ್ಟೆಯ ಮೇಲೆ ಕನ್ನಡದ ಅಂಕಿಗಳಲ್ಲಿ ಸ್ವಾತಂತ್ರ್ಯ ಸಿಕ್ಕ ದಿನಾಂಕ ಉಲ್ಲೇಖಿಸಲಾಗಿದೆ. ಬಸವನಬೀದಿಯ ಪ್ರಮುಖರು ಹಿರಿಯರ ನೇತೃತ್ವದಲ್ಲಿ ಬನ್ನಿಕಟ್ಟೆ ನಿರ್ಮಿಸಲಾಗಿದೆ. ಸ್ವಾತಂತ್ರ್ಯದ ನೆನಪಿಗಾಗಿ ಬನ್ನಿಗಿಡ ನೆಟ್ಟು ಹಿರಿಯರು ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಹಿಂದೆ ಬಸವನಬೀದಿ ಹಾಗೂ ಹಳೂರು ಓಣಿಯ ಮಧ್ಯಭಾಗದ ಸ್ಥಳ ಇದಾಗಿದ್ದರಿಂದ ಇಲ್ಲಿ ಬನ್ನಿಕಟ್ಟೆ ನಿರ್ಮಿಸಲಾಗಿದೆ ಎಂದು ಹಿರಿಯರು ಹೇಳುತ್ತಿದ್ದರು’ ಎಂದು ಸ್ಥಳೀಯ ನಿವಾಸಿ ಅಶೋಕ ಕಲಾಲ ಹೇಳಿದರು.