ಕಾರವಾರ:ಕುವೈತ್ ದೇಶದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕಡವಾಡದ ರೊಬಿನ್ಸನ್ ರುಸಾರಿಯೊ ಅವರ ಪಾರ್ಥಿವ ಶರೀರ ತಿಂಗಳ ಬಳಿಕ ತವರಿಗೆ ಮರಳಿದೆ. ವಿಮಾನದ ಮೂಲಕ ಗೋವಾಕ್ಕೆ ಬಂದಿದ್ದ ಪಾರ್ಥಿವ ಶರೀರವನ್ನು ಗುರುವಾರ ಅವರ ಮನೆಗೆ ತರಲಾಗಿತ್ತು. ಶುಕ್ರವಾರ ಬೆಳಗ್ಗೆ ಸುಂಕೇರಿ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು.

ಹಿನ್ನೆಲೆ:ಕುವೈಪ್ ಫುಡ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ರೊಬಿನ್ಸನ್ ರುಸಾರಿಯೊ ಅವರು ಪ್ರಯಾಣಿಸುತ್ತಿದ್ದ ಕಾರು ಸೆ.15ರಂದು ಅಪಘಾತಕ್ಕೊಳಗಾಗಿತ್ತು. ರೊಬಿನ್ಸನ್ ಹಾಗೂ ಇನ್ನಿಬ್ಬರು ಮೃತಪಟ್ಟಿದ್ದರು. ಅಪಘಾತದಲ್ಲಿ ಸುಟ್ಟು ಕರಕಲಾಗಿದ್ದ ಶವದ ಗುರುತು ಪತ್ತೆ ಹಚ್ಚಲು ರೊಬಿನ್ಸನ್ ಸಹೋದರ ಕುವೈತ್‌ಗೆ ಹೋಗಿದ್ದರು. ಡಿಎನ್‌ಎ ಪರೀಕ್ಷೆಯ ಬಳಿಕ ಮಂಗಳವಾರ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಯಿತು.

ಅವರ ಕುಟುಂಬದ ವಿನಂತಿಯ ಮೇರೆಗೆ ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರು ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.